ಉತ್ತರಪ್ರದೇಶ : ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತಿದ್ದಯುವತಿ, ಒಂದು ದಿನ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಸಿವಿಲ್ ಸರ್ವೀಸ್ ಪರೀಕ್ಷೆಯನ್ನುಪಾಸ್ ಮಾಡಿ ಐಎಎಸ್ ಅಧಿಕಾರಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಉತ್ತರ ಪ್ರದೇಶದ ಯುವತಿ ತೃಪ್ತಿ UPSC ಪರೀಕ್ಷೆಯನ್ನ ಒಂದಲ್ಲಾ ನಾಲ್ಕು ಬಾರಿ ಪಾಸ್ ಮಾಡಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ಯುಪಿಎಸ್‌ಸಿ ಅನ್ನುವುದು ಶಾಲೆಯಲ್ಲಿ ಟಾಪರ್‌ಗಳಿಗೆ ಮಾತ್ರ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಿವಾಸಿ ತೃಪ್ತಿ ಕಲ್ಹನ್ಸ್ ಈ ಮಾತನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಅವರು ಎಂದಿಗೂ ತರಗತಿಯ ಟಾಪರ್ ಆಗಿರಲಿಲ್ಲ. ಬದಲಿಗೆ, ಶಾಲಾ ದಿನಗಳಲ್ಲಿ ಲಾಸ್ಟ್ ಬೆಂಚಿನಲ್ಲಿ ಕುಳಿತು ಮೋಜು-ಮಸ್ತಿ ಜೊತೆಗೆ ಯಾವುದೇ ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಪಡೆಯದೆ ತೃಪ್ತಿಯವರು ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಿಂದ ಬಿಕಾಂ ಪದವಿ ಪಡೆದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ತೇರ್ಗೆಡೆ ಹೊಂದದೆ ಇದ್ದಾಗ ಮನಸ್ಸು ಬದಲಾಯಿಸಿದ ಅವರು, ಟಾಪರ್‌ಗಳನ್ನೇ ಅನುಸರಿಸುವ ಬದಲು ತಮ್ಮ ಶಕ್ತಿಗೆ ತಕ್ಕಂತೆ ಪರೀಕ್ಷೆ ಪಾಸ್ ಮಾಡಲು ರೆಡಿಯಾದರು. ಅದರಂತೆ, ದಿನಕ್ಕೆ 18 ಗಂಟೆ ಓದುವುದರ ಬದಲು ಕಡಿಮೆ ಸಮಯದಲ್ಲಿಯೇ ಉತ್ತಮ ಗುಣಮಟ್ಟದ ಅಧ್ಯಯನಕ್ಕೆ ಒತ್ತು ನೀಡಿದರು.
ಯುಪಿಎಸ್‌ಸಿ ಸಂದರ್ಶನದ ವೇಳೆ ಸರಳತೆ ಹಾಗೂ ಅವರ ಪ್ರಾಮಾಣಿಕತೆಯು ಸಂದರ್ಶಕರನ್ನು ಆಕರ್ಷಿಸಿತು. ಯಾಕೆಂದರೆ ಅವರು ತಮ್ಮ ವಿದ್ಯಾಭ್ಯಾಸದ ಸರಾಸರಿ ಹಿನ್ನೆಲೆ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾಲ್ಕು ಬಾರಿ ಸೋಲುಗಳ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿದರು. ಇದರ ಫಲವಾಗಿ 2023 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 199ನೇ ರ್‍ಯಾಂಕ್ ಪಡೆದು ಅವರು ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಇಂದು ತೃಪ್ತಿ ಕಲ್ಹನ್ಸ್ ಅವರ ಸಾಧನೆಯು ಜೀವನದಲ್ಲಿ ಯಶಸ್ಸಿಗೆ ಚಿನ್ನದ ಪದಕವೇ ಗೆಲುವು ಆಗಬೇಕೆಂದಿಲ್ಲ. ಬದಲಿಗೆ ಕೇವಲ ಕಠಿಣ ಪರಿಶ್ರಮವೊಂದೆ ಸಾಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.






























