ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿನ 2 ಕಾನೂನು ನೆರವು ಉಪ ಪ್ರತಿವಾದಿ ವಕೀಲರ ( (Deputy Legal Aid Defense Counsel) ) ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಅಪರಾಧಿಕ ಕಾನೂನುಗಳ ಬಗ್ಗೆ ಅತ್ಯುತ್ತಮ ಜ್ಞಾನ, ಸಂವಹನ ಕೌಶಲ್ಯ,20 ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದ ಹಾಗೂ 7 ವರ್ಷ ಸೇವಾ ಅನುಭವ ಹೊಂದಿರಬೇಕು. ಇದರೊಂದಿಗೆ ಕೆಲಸಕ್ಕೆ ಅಗತ್ಯ ಇರುವ ಐಟಿ ಜ್ಞಾನ ಬಲ್ಲವರಾಗಿರಬೇಕು. ಆಯ್ಕೆಯಾದವರಿಗೆ ಮಾಸಿಕ ರೂ.45,000 ಗೌರವಧನ ನೀಡಲಾಗುವುದು.
ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ಸ್ವ ಅಕ್ಷರದಲ್ಲಿ ತಮ್ಮ ವೈಯಕ್ತಿಕ ವಿವರ ಭರ್ತಿ ಮಾಡಿ, ಇದೇ ಅಕ್ಟೋಬರ್ 25 ಸಂಜೆ 6 ಗಂಟೆಯ ಒಳಗೆ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು.