ಆ್ಯಂಕರ್ ಅನುಶ್ರೀ ಅವರ ಮದುವೆಯ ಬಗ್ಗೆ ಯಾವಾಗಲೂ ಒಂದಲ್ಲ ಒಂದು ಗಾಸಿಪ್ ಗಳು ಬರ್ತಾನೇ ಇರುತ್ತೆ. ಪ್ರತಿ ವೇದಿಕೆ ಮೇಲೆ ಅವರ ಎದುರು ಪ್ರಶ್ನೆಗಳನ್ನು ಇಡಲಾಗುತ್ತಿತ್ತು. ಈ ವರ್ಷ ವಿವಾಹ ಆಗಿಯೇ ಆಗುತ್ತೇನೆ ಎಂದು ಅವರು ಭರವಸೆ ನೀಡಿದ್ದರು. ಈಗ ಅದು ನಿಜ ಆಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಅನುಶ್ರೀ ಅವರ ವಿವಾಹ ಅದ್ದೂರಿಯಾಗಿ ನಡೆಯಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಮಂಗಳೂರು ಮೂಲದ ಅನುಶ್ರೀ ಅವರು ಮನರಂಜನಾತ್ಮಕವಾಗಿ ಮಾಡುವ ಆ್ಯಂಕರಿಂಗ್ ಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ.
ಇದೀಗ ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಅವರು ವಿವಾಹ ಆಗುತ್ತಿದ್ದಾರೆ. ಹಾಗಾದರೆ ಇದು ಲವ್ ಮ್ಯಾರೇಜಾ ಎಂಬ ಪ್ರಶ್ನೆ ಹುಟ್ಟಬಹುದು. ಅಲ್ಲ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎನ್ನುತ್ತಿವೆ ಮೂಲಗಳು. ಕುಟುಂಬದವರು ನೋಡಿದ ಹುಡುಗನ ಜೊತೆ ಅನುಶ್ರೀ ವಿವಾಹ ಆಗುತ್ತಿದ್ದಾರಂತೆ. ಬೆಂಗಳೂರಿನಲ್ಲೇ ಈ ವಿವಾಹ ಗ್ರಾಂಡ್ಆಗಿ ನೆರವೇರಲಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಅನುಶ್ರೀ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಮಾಹಿತಿ ರಿವೀಲ್ ಮಾಡೋ ಸಾಧ್ಯತೆ ಇದೆ. ಅನುಶ್ರೀ ವಿವಾಹದ ಕುರಿತು ಈ ಮೊದಲು ಸಾಕಷ್ಟು ವರದಿಗಳು ಹರಿದಾಡಿದ್ದವು. ಆದರೆ, ಯಾವುದೂ ನಿಜ ಆಗಿರಲಿಲ್ಲ. ಈಗ ಅವರ ವಿವಾಹದ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡುತ್ತಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.