ಸಾಮಾನ್ಯವಾಗಿ ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಜೊತೆಗೆ ಅನೇಕ ಅನಾರೋಗ್ಯಗಳು ಕಾಡುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ನಾವು ಯಾವಾಗಲೂ ದೇಹವನ್ನು ಹೈಡ್ರೇಟ್ ಆಗಿ ಇಡಬೇಕಾಗುತ್ತದೆ. ಶಾಖದ ಪರಿಣಾಮಗಳನ್ನು ಎದುರಿಸಲು ಕೆಲವು ಮುಖ್ಯ ಸಂಗತಿಗಳನ್ನು ತಲೆಯಲ್ಲಿಟ್ಟುಕೊಳ್ಳುವುದು ಅಗತ್ಯ.
ಬೇಸಿಗೆಯಲ್ಲಿ ಮಹಿಳೆಯರು ಮತ್ತು ಗಂಡಸರಲ್ಲಿ ಕೂಡಾ ಅನೇಕ ಮಂದಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಅಥವಾ ಸೋಂಕು, ಕಿಡ್ನಿ ಸ್ಟೋನ್ ನಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ಇಂತಹ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಅವಶ್ಯಕ. ಅಲ್ಲದೆ ನೀರಿನಾಂಶ ಹೆಚ್ಚಿರುವ ತರಕಾರಿ ಅಥವಾ ಹಣ್ಣುಗಳನ್ನು ಕೂಡಾ ಸೇವಿಸಿದರೆ ಒಳ್ಳೆಯದು. ಬಾರ್ಲಿ ನೀರು, ಸಬ್ಜಾ ಬೀಜದ ನೀರು, ಎಳನೀರು ಕುಡಿಯುವುದರಿಂದ ಮೂತ್ರಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು.
ಬೆಟ್ಟದ ನೆಲ್ಲಿಕಾಯಿ ಮೂತ್ರದ ಸೋಂಕಿಗೆ ಉತ್ತಮ ಔಷಧ ಎಂದು ಹೇಳಲಾಗುತ್ತದೆ. ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದೂ ಒಳ್ಳೆಯದು. ದಿನಕ್ಕೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡುವುದರಿಂದ ದೇಹದ ಉರಿಯೂತ ಮತ್ತು ಶಾಖಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.