ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಭರಮಸಾಗರ ಶಿಶುಅಭಿವೃದ್ಧಿ ಯೋಜನೆಯ ಹುಣಸೇಕಟ್ಟೆ-ಬಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಎಂ.ಬಿ.ಭಾರತಮ್ಮ ಅವರು ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೊಸದುರ್ಗ ತಾಲ್ಲೂಕು ಜಾನಕಲ್ ಶ್ರೀ ಪಾರ್ವತಿ ಸ್ತ್ರೀ ಶಕ್ತಿ ಗುಂಪು ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಪ್ರಶಸ್ತಿಗೆ ಆಯ್ಕೆಯಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭರಮಸಾಗರ ಶಿಶುಅಭಿವೃದ್ಧಿ ಯೋಜನೆಯ ಹುಣಸೇಕಟ್ಟೆ-ಬಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಎಂ.ಬಿ.ಭಾರತಮ್ಮ ಅವರಿಗೆ ಹಾಗೂ ಹೊಸದುರ್ಗ ತಾಲ್ಲೂಕು ಜಾನಕಲ್ ಶ್ರೀ ಪಾರ್ವತಿ ಸ್ತ್ರೀ ಶಕ್ತಿ ಗುಂಪಿನ ಸಂಘದ ಪ್ರತಿನಿಧಿ ಜಿ.ಎಸ್.ನೀಲಮ್ಮ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.