ವಾರಣಾಸಿ : ಭಾರತದ ಅತ್ಯಂತ ಪುರಾತನ ಭಾಷೆಗಳಲ್ಲಿ ಸಂಸ್ಕೃತ ಕೂಡ ಒಂದು. ನಮ್ಮ ದೇಶದ ಕೆಲ ಭಾಷೆಗಳ ಮೂಲ ಸಂಸ್ಕೃತ ಎಂದು ಹೇಳಲಾಗುತ್ತದೆ. ಇದೀಗ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಸಂಸ್ಕೃತದಲ್ಲಿ ಅನೌನ್ಸ್ಮೆಂಟ್ ನೀಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
@MumbaichaDon ಎಂಬ ಟ್ವಿಟರ್ ಖಾತೆಯಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡುತ್ತಿರುವ ವೀಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಎಲ್ಲೆಡೆ ವೈರಲ್ ಆಗಿರುವ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೂ ನಮ್ಮ ಸನಾತನ ಧರ್ಮ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಕೆಲ ನೆಟ್ಟಿಗರು ಈ ವಿಡಿಯೋ ನಿಜವಲ್ಲ, ಸಂಸ್ಕೃತದಲ್ಲಿ ಡಬ್ಬಿಂಗ್ ಮಾಡಿ ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಇಂದು ಬೆಳಗ್ಗೆ ಹಂಚಿಕೊಳ್ಳಲಾಗಿದ್ದು 26 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.