ಲಕ್ನೋ(ಉತ್ತರ ಪ್ರದೇಶ): ಖ್ಯಾತ ಹಾಸ್ಯನಟ ಮುಷ್ತಾಕ್ ಖಾನ್ ಕಿಡ್ನಾಪ್ ಘಟನೆ ಬೆಳಕಿಗೆ ಬಂದಿದ್ದು, 12 ಗಂಟೆ ಕಾಲ ಚಿತ್ರಹಿಂಸೆ ನೀಡಲಾಗಿದೆ. ಖಾನ್ ಮತ್ತು ಅವರ ಮಗನ ಖಾತೆಯಿಂದ 2 ಲಕ್ಷಕ್ಕೂ ಹೆಚ್ಚು ಹಣವನ್ನು ಅಪಹರಣಕಾರರು ವಸೂಲಿ ಮಾಡದ್ದಾರೆ. ‘ಸ್ವಾಗತ’ ಮತ್ತು ‘ಸ್ತ್ರೀ 2’ ನಟ ಮುಷ್ತಾಕ್ ಖಾನ್ ಅಪಹರಣ ಪ್ರಕರಣ ಬೆಚ್ಚಿ ಬೀಳಿಸಿದ್ದು, ಅಪಹರಣಕಾರರ ವಿರುದ್ಧ ಉತ್ತರ ಪ್ರದೇಶದ ಬಿಜ್ನೋರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಾಸ್ಯನಟ ಸುನೀಲ್ ಪಾಲ್ ನಂತರ, ನಟ ಮುಷ್ತಾಕ್ ಖಾನ್ ಅವರ ಅಪಹರಣ ಪ್ರಕರಣವು ಮುನ್ನೆಲೆಗೆ ಬಂದಿದೆ. ಎಫ್‌ಐಆರ್‌ನ ಪ್ರಕಾರ, ಖಾನ್ ಅವರನ್ನು ನವೆಂಬರ್ 20 ರಂದು ದೆಹಲಿ-ಮೀರತ್ ಹೆದ್ದಾರಿಯಿಂದ ಅಪಹರಿಸಲಾಗಿತ್ತು. ಮೀರತ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಕ್ಯಾಬ್‌ನಿಂದ ಕಿಡ್ನಾಪ್ ಆಗಿದ್ದರು. ಮುಷ್ತಾಕ್ ಖಾನ್ ಅವರ ಈವೆಂಟ್ ಮ್ಯಾನೇಜರ್ ಅವರ ಅಪಹರಣದ ದೂರು ದಾಖಲಿಸಿದ್ದಾರೆ. ಹಿರಿಯ ವ್ಯಕ್ತಿಗಳ ಗೌರವಾರ್ಥ ಕಾರ್ಯಕ್ರಮಕ್ಕೆ ರಾಹುಲ್ ಸೈನಿ ಎಂಬ ವ್ಯಕ್ತಿಯಿಂದ ನಟನನ್ನು ಆಹ್ವಾನಿಸಲಾಗಿತ್ತು. ಮುಂಗಡವಾಗಿ 50 ಸಾವಿರ ರೂ. ನೀಡಲಾಗಿತ್ತು. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಾಸ್ಯನಟ ಸುನೀಲ್ ಪಾಲ್ ನಾಪತ್ತೆಯಾದ ನಂತರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಪಾಲ್ ಹಂಚಿಕೊಂಡಿದ್ದಾರೆ. ‘ನಾನು ಸುರಕ್ಷಿತವಾಗಿದ್ದು ಮನೆಗೆ ಮರಳಿದ್ದೇನೆ ಎಂದಿದ್ದಾರೆ. ಡಿಸೆಂಬರ್ 2 ರಂದು, ನಾನು ಭಾಗವಹಿಸುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದ ನೆಪದಲ್ಲಿ ಬುಕ್ಕಿಂಗ್ ಮಾಡಲಾಗಿದೆ. ಆದರೆ, ನಾನು ಬಂದಾಗ ಅದು ಅಪಹರಣ ಎಂದು ತಿಳಿದುಬಂದಿತ್ತು ಎಂದು ಅವರು ಹೇಳಿದರು. ‘ಅವರು ನನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕರೆದುಕೊಂಡು ಹೋದರು. ಒಂದೂವರೆ ಗಂಟೆಗಳ ಪ್ರಯಾಣದಲ್ಲಿ, ನನ್ನನ್ನು ಅಪಹರಿಸಿ, ‘ನಮಗೆ ನಿಮ್ಮಿಂದ ಬೇರೇನೂ ಬೇಡ, ನಮಗೆ ಹಣ ನೀಡಿ, ನಾವು ನಿಮ್ಮನ್ನು ಹೋಗಲು ಬಿಡುತ್ತೇವೆ’ ಎಂದು ಹೇಳಲಾಯಿತು ಎಂದು ಕರಾಳ ಘಟನೆ ಬಿಚ್ಚಿಟ್ಟರು.
‘ಆರಂಭದಲ್ಲಿ, ಅವರು 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟರು. ಅವರು ಅಪಾಯಕಾರಿ ಎಂಬುದನ್ನು ನಾನು ಅರಿತುಕೊಂಡೆ. ನನ್ನನ್ನು ಸುಲಭವಾಗಿ ಹೋಗಲು ಬಿಡುವುದಿಲ್ಲ. ಬಳಿಕ ಬೇಡಿಕೆಯನ್ನು 10 ಲಕ್ಷ ರೂ.ಗೆ ಇಳಿಸಿದರು. ಮಾತುಕತೆಯ ಸಮಯದಲ್ಲಿ, ಅವರು ಖಾತೆ ವರ್ಗಾವಣೆಯ ನೆಪದಲ್ಲಿ ನನ್ನ ಸ್ನೇಹಿತರ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡರು. ಅಂತಿಮವಾಗಿ, ರೂ 7.50 ಲಕ್ಷವನ್ನು ವರ್ಗಾಯಿಸಲಾಯಿತು. ಅವರು ಸಂಜೆ 6:30 ರ ಸುಮಾರಿಗೆ ನನ್ನನ್ನು ಬಿಡುಗಡೆ ಮಾಡಿದರು ಎಂದು ಮಾಹಿತಿ ನೀಡಿದ್ದರು. ಅಪಹರಣಕಾರರು ತಮ್ಮ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಆದ್ದರಿಂದ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಎಲ್ಲವೂ 24 ಗಂಟೆಗಳ ಒಳಗೆ ಸಂಭವಿಸಿತು. ಸಂಜೆ ನನ್ನನ್ನು ಮೀರತ್ ಬಳಿಯ ಹೆದ್ದಾರಿಯಲ್ಲಿ ಬಿಟ್ಟು ಹೋದರು ಎಂದು ಕರಾಳ ಘಟನೆ ನೆನಪಿಸಿಕೊಂಡಿದ್ದಾರೆ.