ಚಿತ್ರದುರ್ಗ : ಐತಿಹಾಸಿಕ ಬಾಣದ ರಂಗನಾಥಸ್ವಾಮಿ ಸ್ಮಾರಕ ಸ್ವಚ್ಛತೆ ಕಾಲೇಜ್ ವಿದ್ಯಾರ್ಥಿಗಳಿಗೆ ಪರಂಪರೆ ಅರಿವು ಕಾಯಕ್ರಮ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿ ಸರ್ಕಾರಿ ವಸ್ತುಸಂಗ್ರಹಾಲಯ, ಚಿತ್ರದುರ್ಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹೊಸದುರ್ಗದ ಇತಿಹಾಸ ಪರಂಪರೆ ಕೂಟ ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ಹೊಸದುರ್ಗ ತಾಲ್ಲೂಕು ಮತ್ತೋಡು ಗ್ರಾಮದ ಶ್ರೀ ಬಾಣದ ರಂಗನಾಥಸ್ವಾಮಿ ದೇವಾಲಯ ಸ್ಮಾರಕವನ್ನು ಸ್ವಚ್ಛತೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ಪರಂಪರೆ ಕೂಟದ ಮುಖ್ಯಸ್ಥರಾದ ಡಾ. ನಾಗರಾಜ್ ಮಾತನಾಡಿ ಹೊಸದುರ್ಗ ತಾಲ್ಲೂಕಿನ ಇತಿಹಾಸಕ್ಕೆ ಮತ್ತೋಡು ಪಾಳೆಗಾರರ ಕೊಡುಗೆ ಅಪಾರವಾಗಿದ್ದು ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಎಲ್ಲಾ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇದರ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಹ್ಲಾದ್, ಜಿ ಮಾತನಾಡಿ ಹೊಸದುರ್ಗ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸ್ಮಾರಕ ಶಿಲಾಶಾಸನ, ವೀರಮಾಸ್ತಿಗಲ್ಲುಗಳು, ಕೋಟೆ ಇನ್ನಿತರ ಪ್ರಾಚ್ಯಾವಶೇಷಗಳಿವೆ ಇಲಾಖೆವತಿಯಿಂದ ಪ್ರಾಚ್ಯಾವಶೇಷಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಸ್ಮಾರಕಗಳ ಸಂರಕ್ಷಣೆಗೆ ಯುವಕರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೈಗೂಡಿಸಬೇಕೆಂದು ತಿಳಿಸಿದರು.
ಡಾ. ಶರತ್ ಬಾಬು ಮಾತನಾಡಿ ಮತ್ತೋಡು ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಸ್ಮಾರಕಗಳ ಕುರಿತು ಮಾಹಿತಿ ಒದಗಿಸಿದರು. ಡಾ. ವಿವೇಕನಂದ ಬಾಣದ ರಂಗನಾಥಸ್ವಾಮಿ ದೇವಾಲಯದ ವಾಸ್ತುಶೈಲಿ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು
ಈ ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕರು ಮತ್ತೋಡು ಗ್ರಾಮದಲ್ಲಿರುವ 101 ದೇವಾಲಯ, ಪುಷ್ಕರಣಿ, ಬಾವಿಗಳ ಕುರಿತು ಮಾಹಿತಿ ಒದಗಿಸಿದರು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.