ಆಂಧ್ರಪ್ರದೇಶ: ದರ್ಶನ ಟಿಕೆಟ್ ಪಡೆಯಲು ನೂರಾರು ಭಕ್ತರು ನೂಕುನುಗ್ಗಲು ನಡೆಸಿದ ಪರಿಣಾಮ ಕಾಲ್ತುಳಿತ ಬೆನ್ನಲ್ಲೇ ಇಂದು(ಜ.13) ತಿರುಪತಿಯ ಲಡ್ಡು ಕೌಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇಲ್ಲಿನ ಲಡ್ಡು ಪ್ರಸಾದ ಕೌಂಟರ್ 47 ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈ ವೇಳೆ ಕೌಂಟರ್ ಬಳಿ ನಿಂತ್ತಿದ್ದ ಭಕ್ತರು ಗಾಬರಿಯಿಂದ ಒಡಲು ಆರಂಭಿಸಿದ್ದಾರೆ ಕೂಡಲೇ ಎಚ್ಚೆತ್ತ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಪ್ರಾಥಮಿಕ ಮಾಹಿತಿ ಪ್ರಕಾರ ಲಡ್ಡು ಪ್ರಸಾದ ಕೌಂಟರ್ ನಲ್ಲಿರುವ ಕಂಪ್ಯೂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.