ಉತ್ತರ ಪ್ರದೇಶ : ಒಮ್ಮೊಮ್ಮೆ ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ನಾವು ಆಯ್ಕೆ ಮಾಡಿಕೊಂಡ ಹಾದಿಯನ್ನು ತ್ಯಜಿಸಬೇಕಾಗುತ್ತದೆ. ಈ ರೀತಿ ತಾನು ಆಯ್ಕೆ ಮಾಡಿಕೊಂಡಿದ್ದ ವೈದ್ಯಕೀಯ ಕ್ಷೇತ್ರವನ್ನು ತೊರೆದು ಯುಪಿಎಸ್ ಸಿ ಪರೀಕ್ಷೆ ಬರೆದು ಐಎಫ್ಎಸ್ ಅಧಿಕಾರಿಯಾದ ಅಪಾಲ ಮಿಶ್ರಾ ಅವರ ಯಶೋಗಾಥೆ ಇದು.
ಅಪಾಲ ಮಿಶ್ರಾ ಅವರು ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ನವರು. ಆಕೆಯ ತಂದೆ ನಿವೃತ್ತ ಕರ್ನಲ್, ಆಕೆಯ ಸಹೋದರ ಸೇನಾ ಮೇಜರ್, ಮತ್ತು ಆಕೆಯ ತಾಯಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಪಾಲಾ ತನ್ನ ಶಾಲಾ ಶಿಕ್ಷಣದುದ್ದಕ್ಕೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದವರು. ನಂತರ ಆರ್ಮಿ ಕಾಲೇಜಿನಲ್ಲಿ ಡೆಂಟಲ್ ಸರ್ಜರಿಯಲ್ಲಿ ಪದವಿ ಪಡೆಯುತ್ತಾರೆ. ಆದರೆ ಅವರಿಗೆ ದೇಶ ಸೇವೆ ಮಾಡುವ ಕನಸು ಇದ್ದ ಕಾರಣ ವೈದ್ಯೀಯ ಅಭ್ಯಾಸವನ್ನು ತೊರೆದು ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಾರೆ.
ಅಪಾಲಾ ಅವರು 3 ವರ್ಷಗಳ ಕಾಲ ಯುಪಿಎಸ್ಸಿ ಪರೀಕ್ಷೆಗಾಗಿ ಕಠಿಣ ತಯಾರಿಗಾಗಿ ನಡೆಸುತ್ತಾರೆ. ಪ್ರತಿದಿನ 7-8 ಗಂಟೆಗಳ ಕಾಲ ಅಧ್ಯಯನದ ಮಾಡುತ್ತಾರೆ. 2020 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 9ನೇ ಅಖಿಲ ಭಾರತ ರ್ಯಾಕ್ ಪಡೆಯುವ ಮೂಲಕ ಉತ್ತೀರ್ಣರಾಗುತ್ತಾರೆ. ಇದರ ಫಲವಾಗಿ ಅವರು ಐಎಎಸ್ ಅರ್ಹತೆ ಪಡೆಯುತ್ತಾರೆ. ಆದಾಗ್ಯೂ ಅವರು ತಮ್ಮ ಮೊದಲ ಆದ್ಯತೆಯನ್ನು ಐಎಫ್ಎಸ್ಗೆ ನಿಡುತ್ತಾರೆ. ಈ ಮೂಲಕ ಅವರು ಸಾವಿರಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.