APL, BPL ಫಲಾನುಭವಿಗಳಿಗೆ ಬಿಗ್ ಶಾಕ್..!

WhatsApp
Telegram
Facebook
Twitter
LinkedIn

ಬೆಂಗಳೂರು: ಸರ್ಕಾರ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ. ರೇಷನ್ ಕಾರ್ಡ್ ಗೆ ಸದ್ದಿಲ್ಲದೇ ಆಪರೇಷನ್ಗೆ ಇಳಿದಿದೆ. ರಾಜ್ಯಾದ್ಯಂತ  ಬರೋಬ್ಬರಿ 10 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್ಟಿ ಬಳಸುತ್ತಿದ್ದ 16 ಸಾವಿರ ಫಲಾನುಭವಿಗಳಿಗೆ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಅದೇ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.

ರಾಜ್ಯಾದ್ಯಂತ ಒಟ್ಟು 10 ಸಾವಿರ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೆಲವು ಕಾರ್ಡ್ ಗಳನ್ನು ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡಿನಿಂದ ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ, ಸರ್ಕಾರಿ ನೌಕರ ಹೀಗೆ ಹಲವು ಮಾನದಂಡ ಇಟ್ಟು ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 9,441 ಕಾರ್ಡ್ APL ಕಾರ್ಡ್ ಆಗಿ ಚೇಂಜ್ ಆಗಿದೆ. ಇನ್ನೂ, ಕೋಲಾರದಲ್ಲಿ 6,500, ಉಡುಪಿ ಜಿಲ್ಲೆಯಲ್ಲಿ 6,422 ಕಾರ್ಡ್, ಬಾಗಲಕೋಟೆಯಲ್ಲಿ 6,299 ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ ಆಗಿ ಬದಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 5,973 ಕಾರ್ಡ್, ವಿಜಯಪುರ ಜಿಲ್ಲೆಯಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯ ಭಾಗದ 2,824, ಶಿವಮೊಗ್ಗ 2,346 BPL ಕಾರ್ಡ್ಗಳು APL ಆಗಿ ಬದಲಾವಣೆಯಾಗಿವೆ.

ಬಿಪಿಎಲ್ ರದ್ದಾದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ‌ ಪರಿಹಾರ ನಿಧಿ ಸಿಗೋದಿಲ್ಲ. ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿಯನ್ನ ಕೈಗೊಳ್ಳಲು ಆಗುವುದಿಲ್ಲ. ಇತ್ತ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಸರ್ಕಾರ ಬಿಎಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದಕ್ಕೆ ವಾಗ್ದಾಳಿ ನಡೆಸಿದ್ದಾರೆ. ಆದ್ರೆ, ಈ ಕುರಿತಂತೆ ಮಾತಾಡಿದ್ದ ಮುನಿಯಪ್ಪ, ಯಾವುದೇ ಕಾರ್ಡ್‌ ರದ್ದಾಗಿಲ್ಲ ಎಂದಿದ್ರು.

ಇನ್ನೂ, ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ ಸಿದ್ದರಾಮಯ್ಯ, ಅನರ್ಹವಿದ್ದ ಕಾರ್ಡ್ಗಳನ್ನು ಮಾತ್ರ ರದ್ದುಗೊಳಿಸಿಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಬಿಪಿಎಲ್ ಕಾರ್ಡ್ಗೆ ಆಪರೇಷನ್ಗೆ ಇಳಿದಿದೆ. ಬಿಪಿಎಲ್ ಕಾರ್ಡ್ ರದ್ದು ಮಾಡಿಲ್ಲ, ಎಪಿಎಲ್ಗೆ ಬದಲಾಯಿಸಿದ್ದೀವಿ ಎಂದು ಸರ್ಕಾರ ಹೇಳ್ತಿದೆ. ಆದ್ರೆ, ಕಾರ್ಡ್ ಹೊಂದಿದವರು ಕಂಗಾಲಾಗಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon