ಬೆಂ.ಗ್ರಾ.ಜಿಲ್ಲೆ: ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪರಸ್ಪರ ಒಡಂಬಡಿಕೆಯೊಂದಿಗೆ ಶಾಲಾ/ಕಾಲೇಜಿನಿಂದ ಹೊರಗುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ಮಾದರಿಯಲ್ಲಿ ಪದವಿ/ಸ್ನಾತಕೋತ್ತರ ಪದವಿಯ ಉನ್ನತ ಶಿಕ್ಷಣವನ್ನು ಹಾಗೂ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಶಿಕ್ಷಣವನ್ನು ನೀಡುವ ಯೋಜನೆ ಹೊಂದಿದ್ದು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಸಕ್ತ ವಿಧ್ಯಾರ್ಥಿಗಳು https://dom.karnataka.gov.in ಅಥವಾ https://minority.ksouportal.com ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಗಸ್ಟ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪ್ರವೇಶಾತಿಗಾಗಿಯೇ ಬೆಂಗಳೂರಿನ ಹಜ್ ಭವನದಲ್ಲಿ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನೀಡುವ ಆಫೈನ್/ದೂರ ಶಿಕ್ಷಣ ಕ್ರಮದ ಪದವಿ ಕೋರ್ಸ್ಗಳು (ಬಿ.ಎ, ಬಿ.ಕಾಂ. ಬಿ.ಎಸ್ಸಿ ಸೇರಿದಂತೆ ಒಟ್ಟು 09 ಕೋರ್ಸ್ಗಳು) (ಎಂ.ಎ, ಎಂ.ಕಾಂ. ಎಂ.ಎಸ್ಸಿ, ಎಂ.ಬಿ.ಎ ಸೇರಿದಂತೆ ಒಟ್ಟು 34 ಕೋರ್ಸ್ಗಳು), ಪದವಿ ಸರ್ಟಿಫಿಕೇಟ್ ಕೋರ್ಸ್ಗಳು (04 ಕೋರ್ಸ್ಗಳು), ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್ ಕೋರ್ಸ್ಗಳು (13 ಕೋರ್ಸ್ಗಳು) ಮತ್ತು ಡಿಪ್ಲೋಮಾ ಕೋರ್ಸ್ಗಳನ್ನು (07 ಕೋರ್ಸ್ಗಳು) ಒಳಗೊಂಡಂತೆ ಒಟ್ಟು 69 ಕೋರ್ಸ್ ಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಹಜ್ ಭವನದ ಅಧಿಕಾರಿಗಳನ್ನು/ ಹಜ್ ಭವನದಲ್ಲಿರುವ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕರನ್ನು/ಪ್ರಾದೇಶಿಕ ಹಜ್ ಭವನವನ್ನು ಅಥವಾ ಪ್ರವೇಶಾತಿ ವಿಭಾಗ ಮೊಬೈಲ್ ಸಂಖ್ಯೆ: 9900667916/9945366062/9113512565/96113512565/9611418726/9900506659/9035395137/8123469017/9844010407/8277799990 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.