ದಾವಣಗೆರೆ :ಜೂನ್.10: ಜೈನ್ ಸಮುದಾಯ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವಧನ ಪಡೆಯಲಿಚ್ಚಿಸುವ ಅರ್ಹ ಫಲಾನುಭವಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಫಲಾನುಭವಿಗಳು ಜಿಲ್ಲೆಯ ಜೈನ್ ಬಸದಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಘಗಳ ನೊಂದಣಿ ಕಾಯ್ದೆ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆ ಅನ್ವಯ ನೊಂದಣಿಯಾದ ಪ್ರಧಾನ ಅರ್ಚಕ, ಗ್ರಂಥಿಗೆ ಮಾಸಿಕ ರೂ.6000/, ಸಹಾಯಕ ಗ್ರಂಥಿ, ಅರ್ಚಕರಿಗೆ ಮಾಸಿಕ ರೂ.5000/ ಗೌರವಧನ ನೀಡಲಾಗುವುದು. ಅರ್ಹ ಫಲಾನುಭವಿಗಳು ನಿಗದಿತ ಅರ್ಜಿಯೊಂದಿಗೆ ಅರ್ಚಕ, ಗ್ರಂಥಿಗಳ ಭಾವಚಿತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಪ್ರತಿ, ಹುದ್ದೆಗೆ ಸಂಬಂಧಪಟ್ಟ ಧಾರ್ಮಿಕ ವಿದ್ಯಾರ್ಹತೆ ಕುರಿತು ದಾಖಲೆ, ಕಳೆದ ಮೂರು ವರ್ಷಗಳಲ್ಲಿ ವಾಸವಿರುವ ಬಗ್ಗೆ ಸ್ಥಳೀಯ ತಹಶೀಲ್ದಾರ್ ಅವರಿಂದ ವಾಸಸ್ಥಳ ದೃಢೀಕರಣ ಹಾಗೂ ಸಂಸ್ಥೆಯವರು ಅರ್ಚಕರ ಮಾಹೆವಾರು ಕರ್ತವ್ಯದ ಹಾಜರಾತಿ, ಸೇವಾ ಪ್ರಮಾಣ ಪತ್ರ ನಿಗದಿತ ನಮೂನೆಯಲ್ಲಿ ಜಿಲ್ಲಾಡಳಿತ ಭವನದಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
 
				 
         
         
         
															 
                     
                     
                    


































 
    
    
        