ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ದೇಶಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿಯಿರುವ 250 ವೆಲ್ತ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ವರ್ಗವಾರು ಹುದ್ದೆಗಳ ವಿವರ
ಸಾಮಾನ್ಯ-103,ಎಸ್ಸಿ-37,ಎಸ್ಟಿ-18, ಒಬಿಸಿ-67, ಇಡಬ್ಲ್ಯುಎಸ್-25 ಸೇರಿ ಒಟ್ಟು – 250 ಹುದ್ದೆಗಳಿವೆ.
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿವಿಯಿಂದ ಎಂಬಿಎ/ ಎಂಎಂಎಸ್/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಎ/ಪಿಜಿಡಿಎಂ ಕೋರ್ಸ್ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2025ರ ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 25 ಹಾಗೂ ಗರಿಷ್ಠ 35 ವರ್ಷಗಳೊಳಗಿರಬೇಕು.
ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಅಭ್ಯರ್ಥಿಗಳು ibps.in ವೆಬ್ಸೈಟ್ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ
ಸಾಮಾನ್ಯ/ ಹಿಂದುಳಿದ ಅಭ್ಯರ್ಥಿಗಳಿಗೆ 1,180 ಹಾಗೂ ಪ.ಜಾತಿ/ ಪ.ಪಂಗಡ/ಅಂಗವಿಕಲ/ ಮಹಿಳಾ ಅಭ್ಯರ್ಥಿಗಳಿಗೆ 177 ರೂ. ಗಳ ಅರ್ಜಿ ಶುಲ್ಕವಿದೆ.
ವೇತನ
ಆಯ್ಕೆಯಾದ ಅರ್ಹರಿಗೆ 64,820- 93,960 ರೂ.ಗಳ ವೇತನಶ್ರೇಣಿ ನೀಡಲಾಗುತ್ತದೆ. ಇದಲ್ಲದೆ ತುಟ್ಟಿ ಭತ್ಯೆ, ವಿಶೇಷ ಭತ್ಯೆ ಮತ್ತು ಇತರ ಭತ್ಯೆಗಳನ್ನು ಬ್ಯಾಂಕಿನಲ್ಲಿ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ನೀಡಲಾಗುತ್ತದೆ.
ಆಯ್ಕೆ ಪಕ್ರಿಯೆ
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಶಾರ್ಟ್ ಲಿಸ್ಟ್ ಗೊಳಿಸಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ, ಗುಂಪು ಚರ್ಚೆ ಹಾಗೂ ಸಂದರ್ಶದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷೆ
25 ಪ್ರಶ್ನೆ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್,25 ಪ್ರಶ್ನೆ ರೀಸನಿಂಗ್, ಇಂಗ್ಲಿಷ್ ವಿಷಯಾಧಾರಿತ 25 ಪ್ರಶ್ನೆಗಳಿರಲಿವೆ.ಹುದ್ದೆಗಳಿಗೆ ಸಂಬಂದಿಸಿದ ವಿಷಯಾಧಾರಿತ 75 ಪ್ರಶ್ನೆಗಳಿಗೆ 150 ಅಂಕಗಳು ಇರಲಿವೆ. ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿಗೆ 225 ಅಂಕ ಇರಲಿದ್ದು 2.30 ಗಂಟೆಗಳ ಸಮಯ ನಿಗದಿ ಮಾಡಲಾಗಿದೆ.ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಗುಂಪು ಚರ್ಚೆ,ವಯಕ್ತಿಕ ಸಂದರ್ಶನ ಕ್ಕೆ ಹಾಜರಾಗಬೇಕು.ಸಂದರ್ಶನ ಕ್ಕೆ 50 ಅಂಕಗಳು. ಒಂದುವೇಳೆ ಆನ್ಲೈನ್ ಪರೀಕ್ಷೆ ನಡೆಸದಿದ್ದರೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ.
ನಿರೀಕ್ಷಣಾ ಅವಧಿ
ಅಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷದ ಪ್ರೋಬೇಶನರಿ ಅವಧಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ :www.unionbankofindia.co.in