ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ದೇಶಾದ್ಯಂತ ಹರಡಿರುವ ಶಾಖೆಗಳ ಮೂಲಕ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. 22,542 ಶಾಖೆಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಗ್ರೂಪ್ ಭಾರತದಲ್ಲೇ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಆಗಿದೆ.
ಹುದ್ದೆ: ವ್ಯಾಪಾರ ಹಣಕಾಸು ಅಧಿಕಾರಿ (MMGS-II)
ಖಾಲಿ ಹುದ್ದೆಗಳು: 150
ಮಾಸಿಕ ವೇತನ: ₹64,820 ರಿಂದ 93,960
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ. IIBF ನೀಡುವ ಫಾರೆಕ್ಸ್ ಪ್ರಮಾಣಪತ್ರ ಮತ್ತು ಎರಡು ವರ್ಷಗಳ ಕೆಲಸದ ಅನುಭವ.
ವಯೋಮಿತಿ: ಡಿಸೆಂಬರ್ 31 ರಂತೆ 23 ರಿಂದ 32 ವರ್ಷಗಳು. ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ.
ಹುದ್ದೆ: ಉಪ ವ್ಯವಸ್ಥಾಪಕ (ಆರ್ಕೈವಿಸ್ಟ್) – 1
ಅರ್ಹತೆ: ಕನಿಷ್ಠ 60% ಅಂಕಗಳೊಂದಿಗೆ ಆಧುನಿಕ ಭಾರತೀಯ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ (ಕ್ರಿ.ಶ. 1750 ರ ನಂತರದ ಅವಧಿ). ಆರ್ಕೈವ್ ಮ್ಯಾನೇಜ್‌ಮೆಂಟ್, ಪಬ್ಲಿಕ್ ರೆಕಾರ್ಡ್ಸ್ ಮ್ಯಾನೇಜ್‌ಮೆಂಟ್, ಸಂರಕ್ಷಣೆ, ಮರುಸ್ಥಾಪನೆ, ಖಾಸಗಿ ಆರ್ಕೈವ್‌ಗಳು, ವ್ಯಾಪಾರ ಆರ್ಕೈವ್‌ಗಳು ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಡಿಪ್ಲೊಮಾ, ಪದವಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ 3 ವರ್ಷಗಳ ಕೆಲಸದ ಅನುಭವ.
ಮಾಸಿಕ ವೇತನ: ₹64,820 ರಿಂದ ₹93,960
ವಯೋಮಿತಿ: ಡಿಸೆಂಬರ್ 31 ರಂತೆ 27 ರಿಂದ 37 ವರ್ಷಗಳು. ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ.
ಆಯ್ಕೆ ಪ್ರಕ್ರಿಯೆ: ಸಂದರ್ಶನ ಮತ್ತು ಕೆಲಸದ ಅನುಭವದ ಆಧಾರದ ಮೇಲೆ. ಆಯ್ಕೆಯಾದವರಿಗೆ 6 ತಿಂಗಳ ತರಬೇತಿ ನಂತರ ಕೆಲಸ ಖಾಯಂ.
ಅರ್ಜಿ ಶುಲ್ಕ: ಎಸ್‌ಸಿ, ಎಸ್‌ಟಿ, ಅಂಗವಿಕಲರಿಗೆ ಶುಲ್ಕ ವಿನಾಯಿತಿ. ಇತರರಿಗೆ ₹750. ಆನ್‌ಲೈನ್‌ನಲ್ಲಿ ಪಾವತಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ: www.bank.sbi/careers ಅಥವಾ https://bank.sbi/web/careers/current-openings ಮೂಲಕ ಅರ್ಜಿ ಸಲ್ಲಿಸಬಹುದು.
ಕೊನೆಯ ದಿನಾಂಕ: ಜನವರಿ 23