10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ 28,740 ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp
Telegram
Facebook
Twitter
LinkedIn

ದೇಶದ ಅತಿದೊಡ್ಡ ಹಾಗೂ ಹಳೆಯ ಸಂಸ್ಥೆಗಳಲ್ಲೊಂದು ಆಗಿರುವ ಭಾರತೀಯ ಅಂಚೆ ಇಲಾಖೆಯಲ್ಲಿ 28,740 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಗೆ ಸಜ್ಜಾಗಿದೆ.

ನೇಮಕಾತಿಯ ವಿಶೇಷತೆ 👉 ಯಾವುದೇ ಲಿಖಿತ ಪರೀಕ್ಷೆ ಇಲ್ಲ 👉 ಕೇವಲ 10ನೇ ತರಗತಿ ಅಂಕಗಳ ಆಧಾರದ ಮೇಲೆ ಆಯ್ಕೆ 👉 ಗ್ರಾಮೀಣ ಹಾಗೂ ಅರೆ-ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ 👉 ಕರ್ನಾಟಕದಲ್ಲೇ 1,023 ಹುದ್ದೆಗಳು ಲಭ್ಯವಾಗುವ ನಿರೀಕ್ಷೆ India Post GDS Recruitment 2026 – ಹುದ್ದೆಗಳ ವಿವರ

1) ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಗ್ರಾಮೀಣ ಅಂಚೆ ಕಚೇರಿಯ ಮುಖ್ಯಸ್ಥರಾಗಿದ್ದು, ಅಂಚೆ ವಿತರಣೆಯ ಜೊತೆಗೆ ಬ್ಯಾಂಕಿಂಗ್ ಮತ್ತು ಸರ್ಕಾರಿ ಸೇವೆಗಳ ನಿರ್ವಹಣೆಯ ಜವಾಬ್ದಾರಿ ಇವರದ್ದು.

2) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) BPM ಅವರಿಗೆ ಸಹಾಯ ಮಾಡುವುದರ ಜೊತೆಗೆ, ಅಂಚೆ ವಿತರಣೆ ಮತ್ತು ಲೆಕ್ಕಪತ್ರಗಳ ಕೆಲಸ ನಿರ್ವಹಿಸಬೇಕು.

3) ಗ್ರಾಮೀಣ ಡಾಕ್ ಸೇವಕ್ (GDS) ಪೋಸ್ಟ್ ಮ್ಯಾನ್ ರೀತಿಯ ಕೆಲಸ, ಪತ್ರಿಕೆಗಳು, ಪಾರ್ಸೆಲ್‌ಗಳು ಹಾಗೂ ಸರ್ಕಾರಿ ನೋಟಿಸ್‌ಗಳ ವಿತರಣೆಯ ಜವಾಬ್ದಾರಿ. ಹುದ್ದೆಗಳ ಹೆಸರು GDS, BPM, ABPM ಒಟ್ಟು ಹುದ್ದೆಗಳು 28,740 ಕರ್ನಾಟಕದ ಹುದ್ದೆಗಳು 1,023 ವಿದ್ಯಾರ್ಹತೆ 10ನೇ ತರಗತಿ ಉತ್ತೀರ್ಣ ಆಯ್ಕೆ ವಿಧಾನ ಮೆರಿಟ್ ಆಧಾರಿತ (ಅಂಕಗಳ ಶೇಕಡಾವಾರು) ಅರ್ಜಿ ವಿಧಾನ ಆನ್‌ಲೈನ್ ಅಧಿಕೃತ ವೆಬ್‌ಸೈಟ್ indiapostgdsonline.gov.in ಪ್ರಮುಖ ದಿನಾಂಕಗಳು (ನಿರೀಕ್ಷಿತ ವೇಳಾಪಟ್ಟಿ) ಅಧಿಸೂಚನೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಆದರೆ ಇಲಾಖಾ ಮೂಲಗಳ ಪ್ರಕಾರ ಈ ಕೆಳಗಿನ ದಿನಾಂಕಗಳನ್ನು ನಿರೀಕ್ಷಿಸಬಹುದು:

📢 ಅಧಿಸೂಚನೆ ಬಿಡುಗಡೆ: 31 ಜನವರಿ 2026

📝 ಅರ್ಜಿ ಸಲ್ಲಿಕೆ ಆರಂಭ: 31 ಜನವರಿ 2026

⏰ ಅರ್ಜಿ ಕೊನೆಯ ದಿನ: 14 ಅಥವಾ 16 ಫೆಬ್ರವರಿ 2026

✏️ ಅರ್ಜಿ ತಿದ್ದುಪಡಿ ಅವಕಾಶ: 18–19 ಫೆಬ್ರವರಿ 2026

📋 ಮೊದಲ ಮೆರಿಟ್ ಪಟ್ಟಿ: 28 ಫೆಬ್ರವರಿ 2026

⚠️ ಸೂಚನೆ: ಅಧಿಕೃತ ಅಧಿಸೂಚನೆ ಬಂದ ಬಳಿಕ ದಿನಾಂಕಗಳಲ್ಲಿ ಸ್ವಲ್ಪ ಬದಲಾವಣೆ ಆಗಬಹುದು.

ರಾಜ್ಯ ಹುದ್ದೆಗಳು ಆಂಧ್ರಪ್ರದೇಶ 1,060 ಅಸ್ಸಾಂ 639 ಬಿಹಾರ 1,347 ಛತ್ತೀಸ್‌ಗಢ 1,155 ದೆಹಲಿ 42 ಗುಜರಾತ್ 1,830 ಹರಿಯಾಣ 270 ಹಿಮಾಚಲ ಪ್ರದೇಶ 520 ಜಮ್ಮು & ಕಾಶ್ಮೀರ 267 ಜಾರ್ಖಂಡ್ 908 ಕರ್ನಾಟಕ 1,023 ಕೇರಳ 1,691 ಮಧ್ಯಪ್ರದೇಶ 2,120 ಮಹಾರಾಷ್ಟ್ರ 3,553 ಈಶಾನ್ಯ ರಾಜ್ಯಗಳು 1,014 ಒಡಿಶಾ 1,191 ಪಂಜಾಬ್ 262 ರಾಜಸ್ಥಾನ 634 ತಮಿಳುನಾಡು 2,009 ತೆಲಂಗಾಣ 609 ಉತ್ತರ ಪ್ರದೇಶ 3,169 ಉತ್ತರಾಖಂಡ 445 ಪಶ್ಚಿಮ ಬಂಗಾಳ 2,982 ಒಟ್ಟು 28,740 1) ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಲಿತಿರಬೇಕು 2) ಸ್ಥಳೀಯ ಭಾಷಾ ಜ್ಞಾನ ಅಭ್ಯರ್ಥಿಯು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು 10ನೇ ತರಗತಿ ಮಟ್ಟದವರೆಗೆ ಓದಿರಬೇಕು ಕರ್ನಾಟಕ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪ್ರಾವೀಣ್ಯತೆ ಅಗತ್ಯ 3) ವಯೋಮಿತಿ ಕನಿಷ್ಠ ವಯಸ್ಸು: 18 ವರ್ಷ ಗರಿಷ್ಠ ವಯಸ್ಸು: 40 ವರ್ಷ ಸಡಿಲಿಕೆ: SC/ST – 5 ವರ್ಷ OBC – 3 ವರ್ಷ PwBD – ಸರ್ಕಾರದ ನಿಯಮಾನುಸಾರ 4) ಇತರೆ ಅಗತ್ಯತೆಗಳು ಮೂಲಭೂತ ಕಂಪ್ಯೂಟರ್ ಜ್ಞಾನ ಸೈಕಲ್ ತುಳಿಯುವ ಸಾಮರ್ಥ್ಯ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧತೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ಈ ರೀತಿ ಆಯ್ಕೆ ಮಾಡಲಾಗುತ್ತದೆ:

1️⃣ 10ನೇ ತರಗತಿ ಅಂಕಗಳನ್ನು ಶೇಕಡಾವಾರಾಗಿ ಪರಿವರ್ತಿಸಲಾಗುತ್ತದೆ

2️⃣ ಹೆಚ್ಚು ಅಂಕ ಪಡೆದವರಿಗೆ ಹೆಚ್ಚಿನ ಮೆರಿಟ್

3️⃣ ವರ್ಗವಾರು (SC/ST/OBC/UR) ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ

4️⃣ ದಾಖಲೆ ಪರಿಶೀಲನೆಯ ನಂತರ ಅಂತಿಮ ನೇಮಕಾತಿ ವೇತನ ಮತ್ತು ಭತ್ಯೆಗಳು (Salary Structure) ಆಯ್ಕೆಯಾದ ಅಭ್ಯರ್ಥಿಗಳಿಗೆ TRCA (Time Related Continuity Allowance) ಅಡಿಯಲ್ಲಿ ವೇತನ ನೀಡಲಾಗುತ್ತದೆ: ಹುದ್ದೆ ಮಾಸಿಕ ವೇತನ ಶ್ರೇಣಿ BPM ₹12,000 – ₹29,380 ABPM / GDS ₹10,000 – ₹24,470 ಡಿಯರ್‌ನೆಸ್ ಅಲವನ್ (DA) ಮೆಡಿಕಲ್ ಸೌಲಭ್ಯ ಪಿಂಚಣಿ ಸೌಲಭ್ಯ (NPS) ಇನ್‌ಕ್ರಿಮೆಂಟ್ ಅವಕಾಶ ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಆಗಿರುತ್ತದೆ:

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon