ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI- State Bank Of India) ಕ್ಲರ್ಕ್ ನೇಮಕಾತಿ 2024 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SBI ನ ಅಧಿಕೃತ ವೆಬ್ಸೈಟ್ (Official website) sbi.co.in ನಲ್ಲಿ ಪರಿಶೀಲನೆ ಮಾಡಬಹುದು.
ಹುದ್ದೆಗಳ ವಿವರ :
* ನೇಮಕಾತಿ ಮಾಡಬೇಕಾದ ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ಹುದ್ದೆ ಹೆಸರು : ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) Junior Associate (Customer Support & Sales)
* ವೇತನ ಶ್ರೇಣಿ : ಮಾಸಿಕ ಆರಂಭಿಕ ವೇತನ ರೂ 26730 /-
* ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳು : 50
* ಒಟ್ಟು ಹುದ್ದೆಗಳ ಸಂಖ್ಯೆ : 13,735
ಶೈಕ್ಷಣಿಕ ಅರ್ಹತೆ :
* ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ (Any equivalent qualification recognized by Central Govt) ಪಡೆದಿರಬೇಕು.
* ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯನ್ನು ಅಭ್ಯರ್ಥಿಗಳು ಬಲ್ಲವರಾಗಿರಬೇಕು.
ಆಯ್ಕೆ ಪ್ರಕ್ರಿಯೆ :
* ಪೂರ್ವಭಾವಿ ಪರೀಕ್ಷೆ/ ಮುಖ್ಯ ಪರೀಕ್ಷೆ ಹಾಗೂ ಭಾಷಾ ಪ್ರಾವಿಣ್ಯತೆ (Language proficiency) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
* ಪೂರ್ವಭಾವಿ ಪರೀಕ್ಷೆಯು (Preliminary examination) 100 ಅಂಕಗಳಿಗೆ ವಸ್ತುನಿಷ್ಠ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
* ಪರೀಕ್ಷೆಯನ್ನು ಆನ್ಲೈನ್ನಲ್ಲಿ (online) ನಡೆಸಲಾಗುವುದು.
ವಯಸ್ಸಿನ ಮಿತಿ :
ಅಭ್ಯರ್ಥಿಯ ವಯಸ್ಸಿನ ಮಿತಿಯು 01.04.2024 ರಂತೆ 20 ವರ್ಷಗಳಿಗಿಂತ ಕಡಿಮೆ ಮತ್ತು 28 ವರ್ಷಕ್ಕಿಂತ ಹೆಚ್ಚಿರಬಾರದು.
ಅರ್ಜಿ ಶುಲ್ಕ :
* ಸಾಮಾನ್ಯ/ OBC/ EWS : ₹ 750/-
* ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಂಗವಿಕಲ ವರ್ಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅಪ್ಲಿಕೇಶನ್ನ ಕೊನೆಯ ದಿನಾಂಕ : ಜನವರಿ 7, 2025