ದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು; ಪದವೀಧರರು ಕೋರ್ಟ್ ಮಾಸ್ಟರ್ ಸೇರಿದಂತೆ 100ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಹಾಕಬಹುದು.
ಹುದ್ದೆಗಳ ವಿವರ
ಕೋರ್ಟ್ ಮಾಸ್ಟರ್ : 31
ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ : 33
ಪರ್ಸನಲ್ ಅಸಿಸ್ಟೆಂಟ್ : 43
ಒಟ್ಟು ಹುದ್ದೆಗಳು : 107
ಕಾನೂನು ಪದವಿ ಪಡೆದಿದ್ದು, ಕನಿಷ್ಠ ಐದು ವರ್ಷ ಪ್ರೆöÊವೇಟ್ ಸೆಕ್ರೆಟರಿ/ ಸೀನಿಯರ್ ಪಿಎ/ಸೀನಿಯರ್ ಸ್ಟೆನೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು. ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವುಳ್ಳವರಿಂದ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ. ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ವಯೋಮಿತಿ ಎಷ್ಟಿರಬೇಕು?
ಕೋರ್ಟ್ ಮಾಸ್ಟರ್ ಹುದ್ದೆಗಳಿಗೆ 30ರಿಂದ 45 ವರ್ಷದೊಳಗಿನವರು, ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ 18ರಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 04-12-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-12-2024
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ : www.sci.gov.in ನಲ್ಲಿ ಕ್ಲಿಕ್ ಮಾಡಿ.