ದಾವಣಗೆರೆ : ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಮೀನುಮಾರಾಟಗಾರರಿಂದ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಗೋಪಗೊಂಡನಹಳ್ಳಿ, ಲಿಂಗನಹಳ್ಳಿ, ಮಾರೇನಹಳ್ಳಿ, ಕಮಗೇತನಹಳ್ಳಿ, ಕಾನನಕಟ್ಟೆ, ದೊಡ್ಡಬೊಮ್ಮೆನಹಳ್ಳಿ, ಕಸವನಹಳ್ಳಿ, ರಂಗಾಪುರ, ಶೆಟ್ಟಿಗೊಂಡನಹಳ್ಳಿ, ವ್ಯಾಸಗೊಂಡನಹಳ್ಳಿ, ಬುಳ್ಳನಹಳ್ಳಿ, ಅಯ್ಯನಹಳ್ಳಿ, ಬಸವಾಪುರ, ಪಾಲನಾನಾಯಕನಕೋಟೆ, ಗುಡ್ಡದಲಿಂಗನಹಳ್ಳಿ, ಬೈರಾನಾಯಕನಹಳ್ಳಿ, ಗೌಡಗೊಂಡನಹಳ್ಳಿ, ಕಣಕುಪ್ಪೆ, ಗೌಡಿಕಟ್ಟೆ, ಹಿರೇಬನ್ನಿಹಟ್ಟಿಲಕ್ಕಂಪುರ, ಸಿದ್ದಯ್ಯನಕೋಟೆ ಮತ್ತು ಮಾಗಡಿ ಈ ಗ್ರಾಮಗಳಲ್ಲಿನ ಪರಿಶಿಷ್ಟ ಪಂಗಡದ ಮೀನುಗಾರರು ಅರ್ಜಿಯನ್ನು ಡಿಸೆಂಬರ್ 20 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

































