ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗಳನ್ನು ನೇರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 13 ಅರ್ಜಿ ಸಲ್ಲಿಸಲು ಕೊನೆಯ ದಿನ.
ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗೆ D.Ed in special education eÉÆvÉUÉ valid RCI CRR nuberವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೊಳಲ್ಕೆರೆ ಬಿಆರ್ಸಿ ಕೇಂದ್ರದಲ್ಲಿ 2 ಹುದ್ದೆಗಳು ಹಾಗೂ ಮೊಳಕಾಲ್ಮುರು ಬಿಆರ್ಸಿ ಕೇಂದ್ರದಲ್ಲಿ 1 ಹುದ್ದೆ ಸೇರಿದಂತೆ ಒಟ್ಟು 03 ಹುದ್ದೆಗಳು ಖಾಲಿ ಇವೆ.
ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆಮ ಚಿತ್ರದುರ್ಗ ಇಲ್ಲಿಗೆ ಮುದ್ದಾಂ ಆಗಿ ಇದೇ ನವೆಂಬರ್ 13ರಂದು ಸಂಜೆ 5 ರೊಳಗಾಗಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
































