ದಾವಣಗೆರೆ : ಕರ್ನಾಟಕ ಕುಕ್ಕುಟ ಮಹಾಮಂಡಳಿ ನಿಯಮಿತ ವತಿಯಿಂದ ಪ್ರಸಕ್ತ ಸಾಲಿನ ಜಗಳೂರು ತಾಲ್ಲೂಕಿನಲ್ಲಿ 99 ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ 5 ವಾರಗಳ ದೇಶೀ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತ ಮಹಿಳಾ ಫಲಾನುಭವಿಗಳ ಡಿಸೆಂಬರ್ 5 ರೊಳಗಾಗಿ ಜಗಳೂರು ತಾಲ್ಲೂಕಿನ ಹತ್ತಿರದ ಪಶುವೈದ್ಯ ಸಂಸ್ಥೆಗಳಲ್ಲಿ ಅರ್ಜಿ ಪಡೆಯಬಹುದೆಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
































