ದಾವಣಗೆರೆ: ಭಾರತ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಕೇಂದ್ರ ಸಶಸ್ತç ಪೊಲೀಸ್ (CAPF) , ಮತ್ತು ಎಸ್‌ಎಸ್‌ಎಫ್ ಪಡೆಗಳಲ್ಲಿ ಕಾನ್ಸ್ಟೇಬಲ್ (GD), , ಹಾಗೂ ಅಸ್ಸಾಂ ರೈಫಲ್‌ನಲ್ಲಿ ರೈಫಲ್ ಮ್ಯಾನ್(GD), ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ವತಿಯಿಂದ 10ನೇ ತರಗತಿ ಉತ್ತೀರ್ಣರಾಗಿರುವವರು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದ, 18 ರಿಂದ 23ವರ್ಷಗಳ ವಯೋಮಿತಿವುಳ್ಳವರು (ಎಸ್.ಸಿ/ಎಸ್.ಟಿ/ಓಬಿಸಿ/ಇಎಸ್‌ಎಂ ವರ್ಗದವರಿಗೆ ನಿಯಮಾನುಸಾರ ಸಡಿಲಿಕೆ ಇದೆ).
ವೆಬೆಸೈಟ್ https://ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ಡಿಸೆಂಬರ್ 31 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520/2557342 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































