ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮನಿಂದ ಭಾರತದೆಲ್ಲೆಡೆ ಕಾರ್ಯನಿರ್ವಹಿಸಲು ಸೀನಿಯರ್ ಮತ್ತು ಜುನಿಯರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಒಟ್ಟು 558 ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.
ಹುದ್ದೆಗಳ ವಿವರ
ಸೀನಿಯರ್ ಸ್ಪೆಷಲಿಸ್ಟ್ : 155
ಜೂನಿಯರ್ ಸ್ಪೆಷಲಿಸ್ಟ್ : 403
ವೇತನ ಶ್ರೇಣಿ :
ಸೀನಿಯರ್ ಸ್ಪೆಷಲಿಸ್ಟ್ : ರೂ. 78,800/-
ಜೂನಿಯರ್ ಸ್ಪೆಷಲಿಸ್ಟ್ : ರೂ. 67,700/-
ಅರ್ಹತಾ ಮಾನದಂಡಗಳು :-
ಶೈಕ್ಷಣಿಕ ಅರ್ಹತೆ :
ಅರ್ಹ ಅಭ್ಯರ್ಥಿಗಳು M.A, M.S, M.Sc, D.Sc, DA, M.Ch, DPM, DMRD, DM, ಅಥವಾ Ph.D ಪದವಿಗಳನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಅಭ್ಯರ್ಥಿಯು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು (26-ಮೇ-2025ರಂತೆ)
ವಯೋಮಿತಿಯಲ್ಲಿ ರಿಯಾಯಿತಿ :- OBC: 3 ವರ್ಷ- SC/ST: 5 ವರ್ಷ- PwBD (ಜನರಲ್): 10 ವರ್ಷ- PwBD (OBC): 13 ವರ್ಷ- PwBD (SC/ST): 15 ವರ್ಷ
ಅರ್ಜಿದಾರರಿಗೆ ಶುಲ್ಕ :
ಮಹಿಳಾ/SC/ST/PwBD/ESIC ನ ಸಿಬ್ಬಂದಿ/ಮಾಜಿ ಸೈನಿಕರಿಗೆ : ಶುಲ್ಕವಿಲ್ಲ- ಇತರ ಅಭ್ಯರ್ಥಿಗಳಿಗೆ: ರೂ. 500/– ಪಾವತಿ ವಿಧಾನ : ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕರ್ ಚೆಕ್
ಆಯ್ಕೆ ಪ್ರಕ್ರಿಯೆ :
ಲೇಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸುವ ವಿಧಾನ :
ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಸೂಚಿಸಿರುವ ವಿಳಾಸಗಳಿಗೆ ಕಳುಹಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಓದಿ ಮತ್ತು ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
2. ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ, ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
3. ಪಾಸ್ಪೋರ್ಟ್ ಫೋಟೋ, ಗುರುತಿನ ಚೀಟಿ, ಶೈಕ್ಷಣಿಕ ಪ್ರಮಾಣಪತ್ರಗಳು ಮೊದಲಾದ ದಾಖಲೆಗಳನ್ನು ಲಗತ್ತಿಸಿ
.4. ಶುಲ್ಕ ಅನ್ವಯಿಸದರೆ ಪಾವತಿಸಿ.5. ಎಲ್ಲಾ ವಿವರಗಳನ್ನು ಪರಿಶೀಲಿಸಿ, ಕೊನೆಗೆ ನಿಗದಿತ ವಿಳಾಸಕ್ಕೆ 26-ಮೇ-2025ರೊಳಗೆ ಕಳುಹಿಸಿ.
ಪ್ರಮುಖ ದಿನಾಂಕಗಳು :- ಅರ್ಜಿಯ ಆರಂಭ ದಿನಾಂಕ : 08-ಏಪ್ರಿಲ್-2025 – ಅಂತಿಮ ದಿನಾಂಕ : 26-ಮೇ-2025
ದೂರದ ಪ್ರದೇಶಗಳ ಅಭ್ಯರ್ಥಿಗಳಿಗೆ ಅಂತಿಮ ದಿನಾಂಕ : 02-ಜೂನ್-2025