ತಿರುಮಲ ತಿರುಪತಿ ದೇಗುಲದಲ್ಲಿ ಉದ್ಯೋಗವಕಾಶವಿದ್ದು ಖಾಲಿ ಇರುವ ನಾಲ್ಕು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಂದೇ ಕೊನೆಯ ದಿನಾಂಕವಾಗಿದ್ದು ಆಸಕ್ತರು ಶೀಘ್ರವಾಗಿ ಅರ್ಜಿ ಸಲ್ಲಿಸಬಹುದು.
3 ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು 1 ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 10 ಅಂದ್ರೆ ಇಂದು ಕೊನೆ ದಿನಾಂಕವಾಗಿದೆ. ಸೀನಿಯರ್ ಆಹಾರ ಸುರಕ್ಷತಾ ಅಧಿಕಾರಿ ರೂ.61,960 ಹಾಗೂ ಆಹಾರ ಸುರಕ್ಷತಾ ಅಧಿಕಾರಿಗೆ ರೂ.44,570ರೂ. ಮಾಸಿಕ ವೇತನ ಇರಲಿದೆ.
ಈ ಹುದ್ದೆಗಳುಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು, ಬಿ.ಎಸ್ಸಿ, ಬಿ.ಟೆಕ್/ಬಿ.ಇ, ಬಿವಿಎಸ್ಸಿ ಅಥವಾ ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. 42 ವರ್ಷಗಳ ಒಳಗಿನವರಾಗಿರಬೇಕು. ಆಫ್‌ಲೈನ್ ಅಥವಾ ಅಧಿಕೃತ ಟಿಟಿಡಿ ವೆಬ್‌ಸೈಟ್ tirumala.org ವೆಬ್‌ಸೈಟ್‌ಗೆ ಭೇಟಿ ಅರ್ಜಿ ಸಲ್ಲಿಕೆ ಮಾಡಬಹುದು. ಇದಕ್ಕೆ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮುಖೇನ ಆಯ್ಕೆ ಮಾಡಲಾಗುತ್ತದೆ.