ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024-25ನೇ ಸಾಲಿನ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 2, 2025.
ಲಭ್ಯವಿರುವ ಸೌಲಭ್ಯಗಳು:
ಎಲೆಕ್ಟ್ರಿಕ್ ದ್ವಿಚಕ್ರ ವಾಹನ
ಉಚಿತ ಹೊಲಿಗೆ ಯಂತ್ರ
ಬೀದಿ ಬದಿ ವ್ಯಾಪಾರಸ್ಥರಿಗಾಗಿ ವಿಶೇಷ ಸಹಾಯಧನ:
ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ ಖರೀದಿಸಲು ಆರ್ಥಿಕ ನೆರವು ಲಭಿಸುತ್ತದೆ. ಬಿಬಿಎಂಪಿಯಿಂದ ಶೇ.90ರಷ್ಟು ಸಹಾಯಧನ ಲಭ್ಯವಿದ್ದು, ವ್ಯಾಪಾರಿಗಳು ಶೇ.10ರಷ್ಟು ಬಂಡವಾಳವನ್ನು ನೀಡಬೇಕು.
ಸಹಾಯಧನ ಲಭ್ಯವಿರುವ ವಾಹನಗಳು:
ಮಾನ್ಯುಯಲ್ ವೆಂಡಿಂಗ್ ವಾಹನಎಲೆಕ್ಟ್ರಿಕಲ್ ಇ-ವೆಂಡಿಂಗ್ ವಾಹನತರಕಾರಿ, ಹೂವು, ಐಸ್ ಕ್ರೀಂ, ಹಣ್ಣು, ಜ್ಯೂಸ್, ಪಾನಿಪೂರಿ-ಚಾಟ್ಸ್, ಫಾಸ್ಟ್ ಫುಡ್, ಬಟ್ಟೆ ಹಾಗೂ ಇತರೆ ಇ-ವೆಂಡಿಂಗ್ ವಾಹನಗಳು
ಅರ್ಜಿಯೊಂದಿಗೆ ಕಡ್ಡಾಯ ದಾಖಲೆಗಳು:
- ವಾಸದ ದೃಢೀಕರಣ ಪತ್ರ
- ಆದಾರ್ ಕಾರ್ಡ್ ಪ್ರತಿಯು
- ವಯಸ್ಸಿನ ಪ್ರಮಾಣ ಪತ್ರ
- ಪಡಿತರ ಚೀಟಿ
- ವಾರ್ಷಿಕ ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ತೃತೀಯ ಲಿಂಗವಾದರೆ ಸಂಬಂಧಪಟ್ಟ ಇಲಾಖೆಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಬುಕ್ ಪ್ರತಿಯು
- ಪ್ರಸ್ತುತ ಯೋಜನೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳು
ಅಭ್ಯರ್ಥಿಗಳು ಬಿಬಿಎಂಪಿ ಕಚೇರಿಗೆ ತೆರಳಿ ಅರ್ಜಿ ನಮೂನೆ ಪಡೆದು, ಈ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಇಲ್ಲದೇ ಇದ್ದರೆ ಈ ಮಾಹಿತಿಯ ಕೆಳಭಾಗದಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://bbmp.gov.in/home ನೋಡಿ.