ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸದ್ಯ ಈ ಸಂಬಂಧ ಕಾನ್ಸ್ಟೇಬಲ್/ಟ್ರೇಡ್ಸ್ಮೆನ್ (Driver/Tradesmen) ಹುದ್ದೆಗಳ ನೇಮಕಾತಿಗಾಗಿ CISF ಅಧಿಸೂಚನೆ ಬಿಡುಗಡೆ ಮಾಡಿದೆ.
ಸಿಐಎಸ್ಎಫ್ (CISF) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲವನ್ನೂ ಸರಿಯಾಗಿ ಗಮನಿಸಬೇಕು. ದೇಶದಲ್ಲಿ ಎಲ್ಲೇ ಇದ್ದರೂ ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆಯ್ಕೆ ಆದ ಅಭ್ಯರ್ಥಿಗಳಿಗೆ ಕೆಲಸ ಕೂಡ ಭಾರತ ದೇಶದ್ಯಾಂತ ಇರುತ್ತದೆ. ಹುದ್ದೆಗಳ ಮಾಹಿತಿ :
ಉದ್ಯೋಗದ ಹೆಸರು : ಕಾನ್ಸ್ಟೇಬಲ್/ಟ್ರೇಡ್ಸ್ಮೆನ್
ಉದ್ಯೋಗಗಳ ಸಂಖ್ಯೆ : 1,161. ಕೆಲಸದ ಸ್ಥಳ : ದೇಶಾದ್ಯಂತ.
ಹುದ್ದೆಗಳ ವಿವರ :
ಖಾಲಿ ಹುದ್ದೆಗಳ ಸಂಖ್ಯೆ : 1,161 ಹುದ್ದೆಗಳು. ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು. ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ (Online) ಮೂಲಕ.
ವೇತನ ಶ್ರೇಣಿ : ಸಿಐಎಸ್ಎಫ್ (CISF) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,700/- ದಿಂದ ರೂ.69,100/- ವರೆಗೆ ವೇತನ ದೊರೆಯಲಿದೆ. ವಯೋಮಿತಿ :
ಸಿಐಎಸ್ಎಫ್ (CISF) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು. ಅರ್ಜಿ ಶುಲ್ಕ :
ಸಾಮಾನ್ಯ/OBC/ಇಡಬ್ಲುಎಸ್ ಅಭ್ಯರ್ಥಿಗಳು : 100 ರೂಪಾಯಿ.
SC/ST/ಮಹಿಳಾ ಅಭ್ಯರ್ಥಿಗಳು : ಶುಲ್ಕ ವಿನಾಯತಿ ಇದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್/Aadhar card.
* ಜನ್ಮ ದಿನಾಂಕ ದಾಖಲೆ/Birth certificate.
* SSLC/ತತ್ಸಮಾನ ವಿದ್ಯಾರ್ಹತೆ ದಾಖಲೆ.
* ಪಾಸ್ಪೋರ್ಟ್ (Passport) ಅಳತೆ ಭಾವಚಿತ್ರ.
* ಇತರೆ ದಾಖಲೆಗಳು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 05 March 2025. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 03 April 2025.
ಪ್ರಮುಖ ಲಿಂಕ್ : ಹೆಚ್ಚಿನ ಮಾಹಿತಿಗಳಿಗಾಗಿ ಭೇಟಿ ನೀಡಬೇಕಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವೆಬ್ಸೈಟ್ ವಿಳಾಸ : https://cisfrectt.cisf.gov.in/