ಚಿತ್ರದುರ್ಗ: ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ಕಚೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆ, 9 ಸಹಾಯಕಿರು ಸೇರಿ 11 ಹುದ್ದೆಗಳನ್ನು ಗೌರವ ಸೇವೆಯ ಆಧಾರದಲ್ಲಿ ನೇಮಕಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಾನಕೊಂಡ ಎ ಹಾಗೂ ಜೆ.ಎನ್.ಕೋಟೆ ಪಲ್ಲವಗೆರೆ ಅಂಗನಾಡಿ ಕಾರ್ಯಕರ್ತೆ ಹುದೆಗಳು ಇತರೆ ವರ್ಗಕ್ಕೆ ಮೀಸಲಿವೆ. ಜಿ.ಆರ್.ಹಳ್ಳಿ-ಎ ಹಾಗೂ ಕುಂಚಿಗನಾಳ್-ಬಿ ಅಂಗನಾಡಿ ಸಹಾಯಕಿ ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ, ಚಿತ್ರದುರ್ಗ ನಗರದ ವಾರ್ಡ್ 34ರ ಜೆ.ಪಿ.ನಗರ ಪರಿಶಿಷ್ಟ ಜಾತಿ, ಜಾನುಕೊಂಡ-ಸಿ, ಚಿತ್ರದುರ್ಗ ನಗರದ ವಾರ್ಡ್-29ರ ಕೊಳಗೋಟೆ-ಎ, ವಾಡ್ 11ರ ಚೇಳುಗೊಡ್ಡ-ಇ, ವಾರ್ಡ್ 20ರ ಹೊಸಬೋವಿ ಕಾಲೋನಿ, ಗೋಪಾಲಪುರ-ಎ, ವಾರ್ಡ್ 09ರ ತಿಪ್ಪಾರೆಡ್ಡಿ ನಗರದ ಅಂಗನಾಡಿ ಸಹಾಯಕಿ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿವೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದ್ವೀತಿಯ ಪಿಯುಸಿ ಹಾಗೂ ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. 19 ರಿಂದ 35 ವರ್ಷದೊಳಗಿನ ಸ್ಥಳೀಯ ಮಹಿಳಾ ಅಥವಾ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸೆಪ್ಟೆಂಬರ್ 5 ಸಂಜೆ 5:30ರ ಒಳಗಾಗಿ ವೆಬ್‍ಸೈಟ್ https://karnemakaone.kar.inc.in/abcd/ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಬಳಕೆದಾರರ ಕೈಪಿಡಿಯಲ್ಲಿನ ಸೂಚನೆಗಳನ್ನು ಸ್ಪಷ್ಟಾವಾಗಿ ಓದಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಒನಕೆ ಓಬವ್ವ ಕ್ರೀಡಾಂಗಣದ ಹತ್ತಿರದ ಬಾಲ ಭವನ ಆವರಣದಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.