ಈ ಬಾರಿ ಜನವರಿಯಿಂದಲೇ ತಾಳಲಾರದಂತಹ ಸೆಕೆ ಆರಂಭವಾಗಿ ಬಿಟ್ಟಿದೆ. ಸೂರ್ಯನ ತಾಪಮಾನಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಈ ಸಮಯದಲ್ಲಿ ತಂಪು ಪಾನೀಯಗಳನ್ನು ಸೇವಿಸಬೇಕೆಂದು ಆಗೋದು ಸಹಜ. ನೀರಿನಾಂಶ ಇರುವ ಹಣ್ಣುಗಳಿಗೂ ಹೆಚ್ಚು ಬೇಡಿಕೆ ಇದೆ. ಹಾಗಂತ ಸೆಕೆಗಾಲದಲ್ಲಿ ಎಳನೀರು ಕುಡಿಯುವುದು ಸಹಜ. ಹಾಗಾದರೆ ವಾರದಲ್ಲಿ ಎಷ್ಟು ದಿನ ಎಳನೀರು ಕುಡಿದ್ರೆ ಒಳ್ಳೆಯದು ಎಂಬುದಕ್ಕೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮೂತ್ರದ ಸೋಂಕಿನ ಸಮಸ್ಯೆ ಹೆಚ್ಚಾದಾಗ ಎಳನೀರು ಕುಡಿಯುತ್ತೇವೆ. ತ್ವಚೆಯ ಆರೋಗ್ಯವನ್ನು ಇದು ಕಾಪಾಡುತ್ತದೆ. ಎಳನೀರಿನಲ್ಲಿ ಹೆಚ್ಚಾಗಿ ಪೊಟ್ಯಾಷಿಯಂ, ಸೋಡಿಯಂ, ಗ್ಲೂಕೋಸ್ ಅಂಶವಿರುತ್ತದೆ. ಆದ್ದರಿಂದ ಸಕ್ಕರೆ ಖಾಯಿಲೆ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಇರುವವರು ಇದನ್ನು ಹೆಚ್ಚು ಸೇವಿಸಿದರೆ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.
ಹೀಗಾಗಿ ವಾರಕ್ಕೆ ಒಂದೆರಡು ಸಲ ಮಾತ್ರ ಎಳನೀರು ಕುಡಿದರೆ ಒಳ್ಳೆಯದು. ಇದ್ದಕಿದ್ದಂತೆ ವಾಂತಿ ಬೇಧಿ ಶುರುವಾದರೆ ಎಳನೀರು ಕುಡಿಯಬಾರದು. ಬೇಸಿಗೆ ಕಾಲದಲ್ಲಿ ಎಳನೀರಿಗಿಂತ ನೀರು ಕುಡಿಯುವುದೇ ಉತ್ತಮ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.