ನೆಲಮಂಗಲ : 200 ರೂ. ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಸಂಭವಿಸಿದೆ.
ಸುಮಾ (30) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಸುಮಾ 8 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಮದುವೆಯಾಗಿದ್ದು, ಈ ದಂಪತಿಗೆ ಎರಡು ಮಕ್ಕಳು ಕೂಡ ಇರುತ್ತಾರೆ.
ಸ್ವಸಹಾಯ ಸಂಘವೊಂದರ ಕಂತು ಕಟ್ಟಲೆಂದು ಸುಮಾ ಗಂಡನಿಗೆ ಕಾಣದಂತೆ 1,300 ರೂ. ಮನೆಯಲ್ಲಿಟ್ಟಿದ್ದರು. 1,300 ರೂ. ಪೈಕಿ ಚಂದ್ರಶೇಖರ್ ಸಬೂಬು ಹೇಳಿ 200 ರೂ. ಸ್ವಂತ ಖರ್ಚಿಗೆ ಬಳಸಿದ್ದ. ಈ ಸಂಬಂಧ ಶುಕ್ರವಾರ ಬೆಳಗ್ಗೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಪತಿ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದ ವೇಳೆ ಸುಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಊಟಕ್ಕೆಂದು ಮನೆಗೆ ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































