ಚಿಕ್ಕಬಳ್ಳಾಪುರ: ಜನನಿಬಿಡ ಸ್ಥಳಗಳಲ್ಲಿ ಸಿನಿಮೀಯ ರೀತಿಯಲ್ಲಿ ಪಿಕ್ ಪ್ಯಾಕೇಟ್ ಹಾಗೂ ಹಣ, ಚಿನ್ನಾಭರಣ ಎಗರಿಸಿ ಪರಾರಿ ಆಗುತ್ತಿದ್ದ ಬುರ್ಖಾಧಾರಿ ಮೂವರು ಕುಖ್ಯಾತ ಮಹಿಳಾ ಕಳ್ಳಿಯರನ್ನು ಜಿಲ್ಲೆಯ ಗೌರಿಬಿದನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ರೇಖಾ ಬಾಯಿ ಕೋಂ ಲೇಟ್ ಶೇಖರ್, (58) ರೋಜಾ ಕೋಂ ಶ್ರೀನಾಥ್, (27) ಕರೀನಾ ಕೋಂ ಧಣ್ಣನ್ ಪಾಟೀಲ್ ( 25) ಬಂಧಿತರು.
ಬಸ್ ಹತ್ತುವಾಗ ಚಿನ್ನದ ಸರ ಹಾಗೂ ಬ್ಯಾಗ್‌ನಲ್ಲಿದ್ದ ಲಕ್ಷ ರೂ. ಕಳವಾಗಿದೆ ಎಂದು ಮಹಿಳೆಯರಿಬ್ಬರು ಪ್ರತ್ಯೇಕವಾಗಿ ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು, ಸಿ.ಸಿ.ಟಿವಿ ದೃಶ್ಯಾವಳಿ ಆಧರಿಸಿ ಮಹಿಳಾ ಕಳ್ಳಿಯರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಶುಕ್ರವಾರ ತಿಳಿಸಿದ್ದಾರೆ.