ಕೊಲಂಬೊ: ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್ ಬೆಂಕಿ ಬೌಲಿಂಗ್ ಶ್ರೀಲಂಕಾ ತಂಡವು ತತ್ತರಿಸಿದೆ. ಶ್ರೀಲಂಕಾ ಇನ್ನಿಂಗ್ಸ್ನ 4ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ 4 ವಿಕೆಟ್ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅಂದ್ರೆ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದುಕೊಂಡಿದ್ದರು. ಇದರೊಂದಿಗೆ ಶ್ರೀಲಂಕಾ ತಂಡವು 5 ಓವರ್ ಮುಕ್ತಾಯಕ್ಕೆ ಪ್ರಮುಖ 5 ವಿಕೆಟ್ ಕಳೆದುಕೊಂಡು 12 ರನ್ ಗಳಿಸಲು ಶಕ್ತವಾಯಿತು. ಇನ್ನು ಆರನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಮತ್ತೊಂದು ವಿಕೆಟ್ ಉರುಳಿಸಿದರು. ಇದೊಂದಿಗೆ ಸಿರಾಜ್ 3 ಓವರ್ಗಳಲ್ಲಿ 1 ಮೆಡನ್ ಓವರ್ ಮಾಡಿ 5 ವಿಕೆಟ್ ಕಿತ್ತು ಕೇವಲ 5 ರನ್ಗಳನ್ನು ಅಷ್ಟೇ ಬಿಟ್ಟು ಕೊಟ್ಟಿದ್ದಾರೆ.
