Asia Cup Anchors : ಆಗಸ್ಟ್ 30ರಿಂದ ಬಹು ನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಇದೀಗ ಟಿವಿ ನಿರೂಪಕರಾಗಿ ಕಾರ್ಯನಿರ್ವಹಿಸಲಿರುವ 5 ನಿರೂಪಕರ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಬಿಡುಗಡೆ ಮಾಡಿದೆ
ಯಾರೆಲ್ಲ ನಿರೂಪಕರು? ವಿಶೇಷ ಎಂದರೆ ಐವರು ನಿರೂಪಕ ಪೈಕಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು. ಈ ಮೂವರು ನಿರೂಪಕಿಯರು ವಿವರ ಇಲ್ಲಿದೆ.
ಮಯಾಂತಿ ಲ್ಯಾಂಗರ್ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮತ್ತು ಐಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರ ಸೊಸೆ ಮಯಾಂತಿ ಲ್ಯಾಂಗರ್ ಕ್ರಿಕೆಟ್ ನಿರೂಪಣೆಗೆ ಇನ್ನಷ್ಟು ಮೆರಗು ತುಂಬಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಇವರು ಹಲವು ಸಮಯಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ.
ಝೈನಾಬ್ ಅಬ್ಬಾಸ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ನಾಸಿರ್ ಅಬ್ಬಾಸ್ ಅವರ ಪುತ್ರಿ ಝೈನಾಬ್ ಅಬ್ಬಾಸ್ ಈ ಬಾರಿಯ ಏಷ್ಯಾ ಕಪ್ ಗೆ ಹೊಸ ರಂಗು ತುಂಬಲಿದ್ದಾರೆ. ಟಿವಿ ನಿರೂಪಕಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರು 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಮೊದಲ ಬಾರಿ ಟಿವಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು.ಜೈತಿ ಖೇರಾ ಭಾರೀ ಸುದ್ದಿಯಾಗಿದ್ದ ಕೋಟಾ ಫ್ಯಾಕ್ಟರಿ ಸಿಸನ್-2 ಮತ್ತು ದೆಹಲಿ ಕ್ರೈಮ್ ಸೀಸನ್-1ರಲ್ಲಿ ಕಾಣಿಸಿಕೊಂಡಿದ್ದ ನಟಿ ಜೈತಿ ಖೇರಾ ಈ ಬಾರಿಯ ಏಷ್ಯಾಕಪ್ ನಲ್ಲಿ ಟಿವಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ಈ ಹಿಂದೆ ಐಪಿಎಲ್ ನಲ್ಲೂ ಟಿವಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.