ಮುಂಬೈ ಸಂಚಾರ ಪೊಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಆರೋಪದ ಮೇಲೆ 51 ವರ್ಷದ ಅಶ್ವಿನಿ ಕುಮಾರ್ ಎಂಬ ಜ್ಯೋತಿಷಿಯನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ.
ನಗರದಲ್ಲಿ ಭಯೋತ್ಪಾದಕ ಬೆದರಿಕೆ ಸಂದೇಶದ ಹಿಂದಿದ್ದ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಶನಿವಾರ ತಿಳಿಸಿದ್ದಾರೆ.
51 ವರ್ಷದ ಅಶ್ವಿನಿ ಕುಮಾರ್ ಬಿಹಾರದವನೆಂದು ಗುರುತಿಸಲಾಗಿದ್ದು, ಮುಂಬೈ ಸಂಚಾರ ಪೊಲೀಸರಿಗೆ ನಗರದಾದ್ಯಂತ “34 ಮಾನವ ಬಾಂಬ್‌ಗಳು” ಎಂಬ ಬೆದರಿಕೆ ಸಂದೇಶ ಬಂದ ಕೆಲವೇ ಗಂಟೆಗಳ ನಂತರ ನೋಯ್ಡಾದಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ.