ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ 9 ತಿಂಗಳ ಕಾಲ ಅಲ್ಲಿಯೇ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಡ್ರ್ ತಿಂಗಳ ಕೊನೆಯಲ್ಲಿ ಭೂಮಿಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಬಾಹ್ಯಾಕಾಶದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿಲೋರ್, ಸ್ಪೇಸ್ ಎಕ್ಸ್ನ ಕ್ಯೂ 10 ನೌಕೆಯು ಮಾರ್ಚ್ 12 ರಂದು ಭೂಮಿಯಿಂದ ಹೊರಡಲಿದೆ. ಅದಾದ ಒಂದು ಅಥವಾ ಎರಡು ವಾರದಲ್ಲಿ ಆ ನೌಕೆಯು ನಮ್ಮನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆದುಕೊಂಡು ಬರಲಿದೆ ಎಂದು ತಿಳಿಸಿದ್ದಾರೆ.