ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಓ.ನಾಗರಾಜ್, ಉಪಾಧ್ಯಕ್ಷರಾಗಿ ಜಯಶಾಲಿಯಾದ ಕೆ.ಆರ್.ಮಹಂತೇಶಾಚಾರ್ ಇವರುಗಳನ್ನು ಜಿಲ್ಲಾ ಬಂಜಾರ ಭವನದಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಬಂಜಾರ(ಲಂಬಾಣಿ) ಸಮಾಜದ ಅಧ್ಯಕ್ಷ ಎಂ.ಸತೀಶ್ಕುಮಾರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನಷ್ಟ ಅನುಭವಿಸದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಸಕಾಲಕ್ಕೆ ಸಾಲ ವಸೂಲಾತಿಯಾಗುವಂತೆ ಎಚ್ಚರ ವಹಿಸಿದಾಗ ಮಾತ್ರ ಸಹಕಾರ ಸಂಘಗಳು ಲಾಭದಲ್ಲಿರುತ್ತವೆ ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಎಂ.ಈಶ್ವರಪ್ಪ ಹಿರೇಕಂದವಾಡಿ, ಹೆಚ್.ಸಿ.ಸತೀಶ್ ಸಾಸಲು, ಬಸವಂತಪ್ಪ ಕಲ್ಲವ್ವನಾಗತಿಹಳ್ಳಿ
ತ್ರಿವೇಣಿ ಗುಂಜಿಗನೂರು, ಬಿ.ದುರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ವರಪ್ಪ, ರುದ್ರೆಗೌಡ, ರಾಮಸ್ವಾಮಿ, ಸದಸ್ಯರುಗಳಾದ ಲೋಕಣ್ಣ ಗುಂಜಿಗನೂರು
ನಾಗರಾಜ್ ಗುಂಜಿಗನೂರು, ಎಂ.ಪಿ.ಈಶ್ವರಪ್ಪ, ಮಧು ರಂಗೇನಹಳ್ಳಿ, ಬಸವಂತಪ್ಪ, ಮಂಜುನಾಥ್ ರಂಗವ್ವನಹಳ್ಳಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.