ರಾಜಸ್ಥಾನ: ಐಎಎಸ್ ಅಧಿಕಾರಿಯ ಕನಸು ಎಲ್ಲರಿಗೂ ಇರುತ್ತದೆ. ಭಾರತದಲ್ಲಿ ಇದೊಂದು ಗೌರವಾನ್ವಿತ ಹುದ್ದೆ. ಆದರೆ ಈ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸುಲಭದ ಮಾತಲ್ಲ. ಅತ್ಯಂತ ಪರಿಶ್ರಮ, ಓದು, ಸ್ಥಿರತೆ ಬೇಕು. ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿ ವ್ಯಕ್ತಿಗಳನ್ನು ನೋಡಬಹುದಾಗಿದೆ. ಅದರಲ್ಲಿ ಒಬ್ಬರು, ರಾಜಸ್ಥಾನದ 2019ರ ಬ್ಯಾಚ್ ಐಎಎಸ್ ಅಧಿಕಾರಿ ಕನಿಶಕ್ ಕಟಾರಿಯಾ.ಬಿ.ಟೆಕ್ ಪದವೀಧರ IAS ಅಧಿಕಾರಿಯಾದ ಸಕ್ಸಸ್ ಕಥೆ.
ಕಟಾರಿಯಾ ಐಐಟಿ ಬಾಂಬೆಯಿಂದ ಬಿ.ಟೆಕ್ ಪದವಿ ಪಡೆದ ನಂತರ ಖಾಸಗಿ ವಲಯದಲ್ಲಿ ಕೆಲಸ ಮಾಡಬೇಕು ಎಂದು ಇಚ್ಚಿಸಿದರು. ಅದೇ ರೀತಿ ಅವರು ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಕೆಲಸ ಮಾಡಿದರು. ಆದರೆ ಹೆಚ್ಚು ವರ್ಷ ವಿದೇಶದಲ್ಲಿ ಕಾಲ ಕಳೆಯಲು ಇಷ್ಟ ಪಡದೇ ಮತ್ತೆ ದೇಶಕ್ಕೆ ಮರಳಿದರು.
ವಿದೇಶದಲ್ಲಿರುವಾಗ ದೇಶ ಮತ್ತು ವಿದೇಶದಲ್ಲಿರುವ ಭಿನ್ನತೆಗಳನ್ನು ಗುರುತಿಸಿ, ನಮ್ಮ ದೇಶದಲ್ಲೂ ಸುಧಾರಣೆ, ಬದಲಾವಣೆಗಳನ್ನು ತರಬೇಕು ಎಂದು ಬಯಸಿದರು. ಈ ಬದಲಾವಣೆಯ ಮನೋಭಾವವೇ ಅವರನ್ನು ಐಎಎಸ್ ಅಧಿಕಾರಿಯನ್ನಾಗಿಸಿತು.ಖಾಸಗಿ ವಲಯದಿಂದ ಸರ್ಕಾರಿ ವಲಯಕ್ಕೆ ಮರಳಬೇಕು ಎಂದು ನಿರ್ಧರಿಸಿದ ಕಟಾರಿಯಾ, ಯುಪಿಎಸ್ಸಿ ಪರೀಕ್ಷೆಯನ್ನು ತೆಗೆದುಕೊಂಡು ಸತತ ಪರಿಶ್ರಮದಿಂದ ಪಾಸ್ ಮಾಡಿದರು.
ಮೂಲತ: ಇವರು ಐಎಎಸ್ ಅಧಿಕಾರಿಗಳ ಕುಟುಂಬದ ಹಿನ್ನೆಲೆ ಹೊಂದಿದವರಾಗಿದ್ದರೂ ಈ ಕ್ಷೇತ್ರದ ಕಡೆ ಮೊದಲಿಗೆ ಒಲವು ಹೊಂದಿರಲಿಲ್ಲ. ದೇಶ ಮತ್ತು ವಿದೇಶಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಬದಲಾವಣೆ ತರಲು ಬಯಸಿದ ಕಟಾರಿಯಾ ಸಾರ್ವಜನಿಕ ಸೇವೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು.ಕಟಾರಿಯಾ ಅವರು UPSC CSE 2018 ಅನ್ನು ಅಖಿಲ ಭಾರತ ಶ್ರೇಣಿ 1 ರೊಂದಿಗೆ ತೇರ್ಗಡೆಗೊಳಿಸಿದರು.