ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಮುಗಿಯದ ಕಥೆಯಾಗಿದೆ. ಇದೀಗ ಬಣಗಳ ಗುದ್ದಾಟದ ನಡುವೆ ದಿಢೀರಾಗಿ ಪ್ರಧಾನಿ ಮೋದಿಯವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಈ ನಡುವೆಯೇ ವಿಜಯೇಂದ್ರ ನವದೆಹಲಿಗೆ ತೆರಳಿ ಅದ್ರಲ್ಲೂ ದೆಹಲಿಯಲ್ಲೂ ಸಂಸತ್ತ ಅಧಿವೇಶನ ನಡುವೆಯೇ ಪ್ರಧಾನಿ ಮೋದಿಯನ್ನ ಭೇಟಿಯಾಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯತ್ನಾಳ್ – ವಿಜಯೇಂದ್ರ ಬಣಗಳ ಸಂಘರ್ಷ ತಾರಕ್ಕಕ್ಕೆ ಏರಿದೆ ಇನ್ನೂ ಸಹ ವಿಜಯೇಂದ್ರ ವಿರುದ್ಧವಾಗಿ ಯತ್ನಾಳ್ ಬಹಿರಂಗ ಹೇಳಿಕೆಗಳನ್ನ ನೀಡುತ್ತಿದ್ದಾರೆ ಇದ್ರ ನಡುವೆ ಎರಡು ಬಣಗಳು ಪ್ರತ್ಯೇಕವಾಗಿ ಸಮಾವೇಶದಲ್ಲಿ ಮಾಡಬೇಕು ಎಂಬ ಸುದ್ದಿಯೂ ಹರಿದಾಡುತ್ತಿದೆ ಇದ್ರ ಬೆನ್ನಲ್ಲೇ ವಿಜಯೇಂದ್ರ ಪ್ರಧಾನಿ ಮೋದಿಯನ್ನ ಭೇಟಿಯಾಗಿ ಚರ್ಚೆ ನಡೆಸಿರೋದು ಬಿಜೆಪಿ ನಾಯಕರಲ್ಲಿ ಕುತೂಹಲ ಮೂಡಿಸಿದೆ.
ವಿಜಯೇಂದ್ರ ಭೇಟಿ ವೇಳೆ ಯಾವ ಸಂದೇಶ ಕೊಟ್ಟಿದ್ದಾರೆ ಪ್ರಧಾನಮಂತ್ರಿಗಳು, ರಾಜ್ಯದಲ್ಲಿ ಉಂಟಾಗಿರುವ ಗೊಂದಲಕ್ಕೆ ಪಿಎಂ ಏನಾದರೂ ಸಲಹೆ ನೀಡಿದ್ರಾ ? ಯತ್ನಾಳ್ ಬಣ ವಿಜಯೇಂದ್ರರನ್ನ ಕೇಳಗಿಳಸಬೇಕು ಎಂಬ ಒತ್ತಾಯಕ್ಕೆ ಪಿಎಂ ಏನಾದರೂ ಸಲಹೆ ನೀಡಿದ್ರಾ ? ಯತ್ನಾಳ್ ಅಂಡ್ ಟೀಂ ವಿರುದ್ಧ ಖುದ್ದು ಪಿಎಂ ಭೇಟಿಯಾಗಿ ವಿಜಯೇಂದ್ರ ದೂರು ನೀಡಿದ್ರಾ ? ಹೀಗೆ ಹತ್ತು ಹಲವು ಪ್ರಶ್ನೆಗಳು ಪಕ್ಷದ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ ವಿಜಯೇಂದ್ರ ಮಾತ್ರ ಟ್ವಿಟರ್ ನಲ್ಲಿ ಪ್ರಧಾನಿ ಭೇಟಿಯಾಗಿದ್ದು ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿಯನ್ನ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು , ಅಲ್ದೇ ಭೇಟಿಯ ಸಂದರ್ಭದಲ್ಲಿ ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಹೇಳಿದ್ದಾರೆ ಎಂದೆಲ್ಲ ವಿಜಯೇಂದ್ರ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ.