ಭಾರತ-ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆಯ ನಡುವೆ ಬಲೂಚಿಸ್ತಾನವು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ತನಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡಬೇಕೆಂದು ವಿಶ್ವಸಂಸ್ಥೆಯ ಎದುರು ತನ್ನ ಅಹವಾಲನ್ನು ಮಂಡಿಸಿದೆ.
ಬಲೂಚಿಸ್ತಾನವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.ಅನೇಕ ದಶಕಗಳಿಂದ ಉಗ್ರವಾದ ಮತ್ತು ಹಿಂಸಾಚಾರಗಳಿಂದ ಬೆಂದಿರುವ ಬಲೂಚಿಸ್ತಾನ ಸ್ವಾತಂತ್ರ್ಯಕ್ಕಾಗಿ ತವಾಕಿಸುತ್ತಿದೆ.
ಬಲೂಚಿ ರಾಷ್ಟ್ರೀಯ ನಾಯಕರು ತಮ್ಮ ದೇಶಕ್ಕಾಗಿ ಪ್ರತ್ಯೇಕ ಬಾವುಟ ಮತ್ತು ಭೂಪಟಗಳನ್ನು ರಚಿಸಿಕೊಂಡಿದ್ದು ಅವುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ಹಬ್ಬುತ್ತಿವೆ. ಹೊಸದಾಗಿ ರಚನೆಯಾಗಲಿರುವ ತಮ್ಮ ರಾಷ್ಟ್ರಕ್ಕೆ ‘ರಿಪಬ್ಲಿಕ್ ಆಫ್ ಬಲೂಚಿಸ್ತಾನ’ ಎಂದು ನಾಮಕರಣವನ್ನೂ ಮಾಡಿದ್ದಾರೆ.
ಅಲ್ಲಿನ ಮುಂಚೂಣಿ ಬರಹಗಾರ ಮತ್ತು ಹೋರಾಟಗಾರ ಮಿರ್ ಯಾರ್ ಬಲೂಚ್ ‘ಬಲೂಚಿಸ್ತಾನ ಪಾಕಿಸ್ತಾನವಲ್ಲ’ ಎಂಬ ಚಳುವಳಿಯನ್ನು ಆರಂಭಿಸಿದ್ದಾರೆ.