ಬೆಂಗಳೂರು : ಜೈನ ಧರ್ಮದ ಪವಿತ್ರ ಹಬ್ಬವಾದ ‘ಮಹಾವೀರ ಜಯಂತಿ’ ಹಿನ್ನೆಲೆಯಲ್ಲಿ ನಾಳೆ, ಮಾರ್ಚ್ 30ರ ಸೋಮವಾರ, ಬೆಂಗಳೂರು ನಗರಾದ್ಯಂತ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆದೇಶ ಹೊರಡಿಸಿದೆ.
ಹೌದು. ಮಹಾವೀರ ಜಯಂತಿಯ ಹಿನ್ನೆಲೆಯಲ್ಲಿ ಮಾರ್ಚ್30, 2026 (ಸೋಮವಾರ) ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (BBMP ವ್ಯಾಪ್ತಿ) ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದೇಶದ ವಿವರ: ಮೇಲೆ ತಿಳಿಸಿದ ದಿನಾಂಕದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಗಮನಿಸಿ: ಈ ಆದೇಶವು ಬೆಂಗಳೂರು ನಗರದಾದ್ಯಂತ ಅನ್ವಯವಾಗಲಿದ್ದು, ಸಾರ್ವಜನಿಕರು ಮತ್ತು ಮಾಂಸ ಮಾರಾಟಗಾರರು ಈ ನಿಯಮವನ್ನು ಪಾಲಿಸುವಂತೆ ಸೂಚಿಸಲಾಗಿದೆ.































