ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಆದಾಯ ಹೆಚ್ಚಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಆದಾಯದ ಮೂಲವನ್ನು ಹುಡುಕುತ್ತಿರುವ ಬಿಎಂಟಿಸಿ, ಇದೀಗ ಜಾಹೀರಾತು ಮೂಲಕ ಆದಾಯ ಹೆಚ್ಚಿಸಲು ಪ್ಲ್ಯಾನ್ ಮಾಡಿದೆ.
3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ಮಾಡಿ ಕೊಂಡಿದೆ. ಇಷ್ಟು ದಿನ ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇತ್ತು. ಇದೀಗ ಬಸ್‌ಗಳ ಮುಂದಿನ ಮತ್ತು ಹಿಂಭಾಗದ ಗಾಜುಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಂಡಿದೆ.
ಈ ಮೂಲಕ ತಮ್ಮ ಆದಾಯ ಹೆಚ್ಚಿಸಲು ಬಿಎಂಟಿಸಿ ಮೆಗಾ ಪ್ಲ್ಯಾನ್ ಮಾಡಿದೆ. 6 ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಪೈಕಿ 3000 ಹವಾನಿಯಂತ್ರಿತವಲ್ಲದ ಬಸ್‌ಗಳಲ್ಲಿ ಹೊಸ ರೂಪದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಮುಂದಾದ ಬಿಎಂಟಿಸಿ ನಿಗಮಕ್ಕೆ ಮಾಸಿಕ 30 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಹೊಂದುವ ನಿರೀಕ್ಷೆ ಇದೆ.