ನವದೆಹಲಿ: ಕೆಂಪು ಕೋಟೆಯ ಆವರಣದೊಳಕ್ಕೆ ಪ್ರವೇಶಿಸಲು ಪ್ರಯತ್ನ ನಡೆಸಿದ ಐವರು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಹತ್ತೇ ದಿನಗಳು ಉಳಿದಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕೆಂಪು ಕೋಟೆಯ ಸುತ್ತ ಭದ್ರತೆ ಹೆಚ್ಚಿಸಿದ್ದಾರೆ. ಕೆಂಪು ಕೋಟೆಯ ಪ್ರವೇಶ ನಿಯಂತ್ರಣ ಬಿಂದುವಿನಲ್ಲಿ ನಿಯೋಜನೆ ಮಾಡಲಾದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದೆ.
ನಿಯಮಿತವಾದ ದಾಖಲೆ ತೋರಿಸದ ಕಾರಣ ಆರೋಪಿಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಅವರು ಅಕ್ರಮವಾಗಿ ನೆಲೆಸಿರುವ ವಿಚಾರ ಬೆಳಕಿಗೆ ಬಂದಿದೆ.