ಬ್ಯಾಂಕ್ ಆಫ್ ಬರೋಡಾ’ದಲ್ಲಿ ಇತ್ತೀಚೆಗೆ ವಿವಿಧ ವಿಭಾಗಗಳಲ್ಲಿ ನೇಮಕಾತಿ ಆರಂಭಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಬ್ಯಾಂಕ್ : ಬ್ಯಾಂಕ್ ಆಫ್ ಬರೋಡಾ
ಹುದ್ದೆಗಳ ಹೆಸರು : ಸ್ಪೆಷಲಿಸ್ಟ್ ಆಫೀಸರ್ (SO)
ಒಟ್ಟು ಹುದ್ದೆಗಳ ಸಂಖ್ಯೆ : 1,267 ಹುದ್ದೆಗಳು
ಮಾಸಿಕ ವೇತನ : ನಿಯಮಾನುಸಾರ
ಪೋಸ್ಟಿಂಗ್ : ಭಾರತ
ಗ್ರಾಮೀಣ ಮತ್ತು ಕೃಷಿ ಬ್ಯಾಂಕಿಂಗ್ ವಿಭಾಗ : 200 ಹುದ್ದೆಗಳು, ಚಿಲ್ಲರೆ ಹೊಣೆಗಾರಿಕೆ : 450 ಹುದ್ದೆಗಳು, MSME ಬ್ಯಾಂಕಿಂಗ್ : 341 ಹುದ್ದೆಗಳು, ಮಾಹಿತಿ ಭದ್ರತೆ : 9 ಹುದ್ದೆಗಳು, ಅಧ್ಯಾಪಕರ ನಿರ್ವಹಣೆ : 22 ಹುದ್ದೆಗಳು, ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ : 30 ಹುದ್ದೆಗಳು, ಹಣಕಾಸು ವಿಭಾಗದಲ್ಲಿ : 13 ಹುದ್ದೆಗಳು, ಐಟಿ : 177 ಹುದ್ದೆಗಳು ಮತ್ತು ಎಂಟರ್‌ಪ್ರೈಸ್ ಡೇಟಾ ಮ್ಯಾನೇಜ್‌ಮೆಂಟ್ ಆಫೀಸರ್ ವಿಭಾಗ : 25 ಹುದ್ದೆಗಳು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು Degree/PG Degree/Diploma/PhD/CA/CMA/CS/CFA ಅಥವಾ ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅರ್ಜಿ ಶುಲ್ಕ :
ಸಾಮಾನ್ಯ ವರ್ಗ/EWS/OBC ಅಭ್ಯರ್ಥಿಗಳು : 600/- ರೂ. (ತೆರಿಗೆ ಬಿಟ್ಟು). ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಮಹಿಳಾ ಅಭ್ಯರ್ಥಿಗಳು : ರೂ 100/-
ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬೇಕು. ಯಾವ ಕಾರಣಕ್ಕೆ ಅರ್ಜಿ ಶುಲ್ಕ ಹಿಂತಿರುಗಿಸುವುದಿಲ್ಲ.
ಆಯ್ಕೆ ಹೇಗೆ.?
ಅಭ್ಯರ್ಥಿಗಳಿಗೆ Online ಮೂಲಕ ಪರೀಕ್ಷೆ ನಡೆಸಲಾಗುತ್ತದೆ. 225 ಅಂಕಗಳ 150 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಕಾಲಾವಕಾಶವನ್ನು 150 ನಿಮಿಷಗಳಿಗೆ ನಿಗದಿ ಪಡಿಸಲಾಗಿದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 January 2025.
ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಬೇಕು. Website ನಲ್ಲಿ Careers ಆಯ್ಕೆ ಮಾಡಿಕೊಳ್ಳಿ, ಬಳಿಕ Current Opportunities ಮೇಲೆ Click ಮಾಡಿ. ನಂತರ ಪರದೆ ಮೇಲೆ ಕಾಣವು Recruitment ಆಯ್ಕೆ ಆಯ್ದುಕೊಳ್ಳಬೇಕು.
Apply Now ಮೇಲೆ Click ಮಾಡಿದ ಬಳಿಕ ಅಲ್ಲಿ ಕೇಳಲಾಗುವ ನಿಮ್ಮ ಹೆಸರು, Mobile ಸಂಖ್ಯೆ ಮತ್ತು ಇತರ ಅಗತ್ಯ ವಿವರ ನಮೂದಿಸಿ. ಹೊಸದಾಗಿ ನೋಂದಣಿ ಮಾಡಿಕೊಂಡು Login ಆಗಬೇಕು. ನಿಗದಿತ ಅರ್ಜಿ ಸಮೂನೆಯಲ್ಲಿ ಅಗತ್ಯ ವಿವರ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು Upload ಮಾಡಬೇಕು. ನಂತರ ನಿಮ್ಮ ಜಾತಿ ವರ್ಗದ ಆಧಾರದಲ್ಲಿ ಇರುವ Fees ಪಾವತಿಸಬೇಕು. ಇದೆಲ್ಲ ಆದ ಬಳಿಕ ಅರ್ಜಿ Submit ಮಾಡಿ, ಮುಂದಿನ ಉಪಯೋಗಕ್ಕಾಗಿ Download ಮಾಡಿಕೊಳ್ಳಿ.