ಬಾರ್ಲಿ ನೀರನ್ನು ಹಿಂದಿನ ಕಾಲದಿಂದಲೂ ಬಳಸುವುದು ರೂಢಿ. ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಕೊಬ್ಬು ಕರಗಲು ಇದು ಸಹಾಯಕವಾಗುವುದಲ್ಲದೆ ಹೃದಯಾಘಾತದ ಸಾಧ್ಯತೆಯನ್ನೂ ಇದು ಕಡಿಮೆ ಮಾಡುತ್ತದೆ. ಅದರಲ್ಲೂ ಇದನ್ನು ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.
ಗರ್ಭಿಣಿಯರು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಂದರ್ಭ ಬಾರ್ಲಿ ನೀರು ಕುಡಿಯುವುದರಿಂದ ಮೂತ್ರಕೋಶದ ಸೋಂಕನ್ನು ಕೂಡಾ ಇದು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಜೀವಸತ್ವಗಳು, ಖನಿಜಗಳು ಹೇರಳವಾಗಿರುವುದರಿಂದ ಗರ್ಭದಲ್ಲಿನ ಮಗುವಿನ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ.
ಬಾರ್ಲಿ ನೀರು ದೇಹದಲ್ಲಿನ ಹಾರ್ಮೋನಿನ ಅಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಹೊಟ್ಟೆಯ ಸಮಸ್ಯೆ, ಮಲಬದ್ಧತೆಯಂತಹ ತೊಂದರೆಯನ್ನು ಕೂಡಾ ಇದು ನಿವಾರಿಸುತ್ತದೆ. ಆರೋಗ್ಯಕ್ಕೆ ಉತ್ತಮ ಆಹಾರವಾದ ಇದನ್ನು ಮಿತಿಯಲ್ಲಿ ಸೇವಿಸಿದರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.