ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ಫಿನಾಲೆ ಆರಂಭಕ್ಕೂ ಮುನ್ನವೇ ದೊಡ್ಮನೆಯಿಂದ ಸ್ಪರ್ಧಿ ರಜತ್ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ. ಹೌದು. ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆಯು ಇಂದು ಸಂಜೆ 6 ಗಂಟೆಗೆ ಶುರುವಾಗಲಿದೆ. ಫಿನಾಲೆ ಆರಂಭಕ್ಕೂ ಮುನ್ನವೇ ರಜತ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಫಿನಾಲೆಗೆ 5 ಜನರು ಮಾತ್ರ ಹೋಗಬೇಕಿದ್ದು ಒಬ್ಬರು. ಆದರೆ ಐವರು ಸ್ಪರ್ಧಿಗಳು ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ. studybizz.com ನಲ್ಲಿ ಬಂದ ವೋಟ್ ಪ್ರಕಾರ, ಹನುಮಂತ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾನೆ. ಉಗ್ರಂ ಮಂಜು ಎರಡನೇ ಸ್ಥಾನದಲ್ಲಿದ್ದಾರೆ. ಮೋಕ್ಷಿತಾ ಮೂರನೇ ಸ್ಥಾನದಲ್ಲಿದ್ದಾರೆ. ತ್ರಿವಿಕ್ರಮ್, ಭವ್ಯಾ ಹಾಗೂ ರಜತ್ ಬಾಟಮ್ 3 ನಲ್ಲಿದ್ದಾರೆ. ಈ ಮೂವರ ಪೈಕಿ ರಜತ್ ಇಂದು ಬಿಗ್ ಬಾಸ್ ಮನೆಯಿಂದ ಮೊದಲು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.