ತಲೆನೋವು ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಕೆಲವರಿಗೆ ಸಾಮಾನ್ಯವಾಗಿದ್ದರೆ, ಇನ್ನೂ ಕೆಲವರಿಗೆ ಆಗಾಗ ಬರುತ್ತಿರುತ್ತದೆ.
ಈ ನೋವು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಒತ್ತಡ, ಹೆಚ್ಚಿದ ಆತಂಕ, ಆಯಾಸ, ಅತಿಯಾದ ಕೆಲಸ, ಕೆಟ್ಟ ಅಭ್ಯಾಸಗಳು ಕಾರಣಗಳಿರಬಹುದು. ಕೆಲವೊಮ್ಮೆ ಕಾರಣವಿಲ್ಲದೆಯೂ ತಲೆನೋವು ಬರಬಹುದು! ತಲೆನೋವು ಬಂದಾಗ ಕೆಲವರು ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುತ್ತದೆ. ಈ ನೋವು ನಿವಾರಕ ಮಾತ್ರೆಗಳು ವಿವಿಧ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಇದರಿಂದ ದೊಡ್ಡ ದೊಡ್ಡ ಸಮಸ್ಯೆಗಳೇ ಎದುರಾಗಬಹುದು! ತಲೆನೋವು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ಕೆಳಗಿನ ವಿಶಿಷ್ಟ ಮನೆಮದ್ದುಗಳನ್ನು ಟ್ರೈ ಮಾಡಿ. ಇದರಿಂದ ನೋವಿನ ಸಮಸ್ಯೆ ದೂರವಾಗುತ್ತದೆ. ತಲೆನೋವಿಗೆ ಸಾಮಾನ್ಯ ಕಾರಣವೆಂದರೆ ನಿರ್ಜಲೀಕರಣ. ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿದರೆ ನಿರ್ಜಲೀಕರಣದ ಅಪಾಯ ಕಡಿಮೆ ಮಾಡಬಹುದು. ಇದು ತಲೆನೋವನ್ನು ಸಹ ಕಡಿಮೆ ಮಾಡುತ್ತದೆ.
ಇನ್ನು ಯೋಗ-ಧ್ಯಾನ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯ ದಿನಗಳಲ್ಲಿಯೂ ಮಾಡಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ತಲೆನೋವನ್ನು ತಡೆಯುತ್ತದೆ. ವಾಲ್‌ನಟ್ಸ್, ಬಾದಾಮಿ ಮತ್ತು ಗೋಡಂಬಿಯನ್ನು ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಅವುಗಳಲ್ಲಿ ಉತ್ತಮ ಮೆಗ್ನೀಸಿಯಮ್ ಹೊಂದಿವೆ. ಇದು ತಲೆನೋವನ್ನು ನಿವಾರಿಸುತ್ತದೆ. ಶುಂಠಿ ಟೀ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.
ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ತಲೆನೋವನ್ನು ಕಡಿಮೆ ಮಾಡುತ್ತದೆ. ಶುಂಠಿ ಚಹಾ ಅನೇಕ ಜನರಿಗೆ ಮಾನಸಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ನಿಮಗೆ ಆಗಾಗ್ಗೆ ತಲೆನೋವು ಇದ್ದರೆ ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ.































