ಬಾಗಲಕೋಟೆ : ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ನಲ್ಲಿ ಮೋಸ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಲಿಂಕ್ ಒತ್ತಿ ಎಂದು ಫೇಕ್ ಲಿಂಕ್ ಕಳುಹಿಸಿ ಸೈಬರ್ ವಂಚಕರು ದೋಖಾ ಮಾಡುತ್ತಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಪೋಟೋವನ್ನೇ ಬಳಸಿಕೊಂಡು ಜನರನ್ನ ವಂಚಿಸುತ್ತಿದ್ದಾರೆ. ಹೌದು ಬಾಗಲಕೋಟೆಯಲ್ಲಿ ಇಂತದ್ದೊಂದು ಘಟನೆ ಬೆಳಕಿಗೆ ಬಂದಿದೆ.
ಮೊಬೈಲ್‌ನಲ್ಲಿ ಒಂದು link ಬರುತ್ತದೆ. ಈ ಒಂದು ಲಿಂಕ್ ಓಪನ್ ಮಾಡಿದ್ರೆ ತಕ್ಷಣ ಸಿಎಂ ಸಿದ್ದರಾಮಯ್ಯ ಅವರ ಪೋಟೋ ಕಾಣಿಸಿಕೊಳ್ಳುತ್ತದೆ. ಲಿಂಕ್ open ಮಾಡಿದ ತಕ್ಷಣ ನಿಮ್ಮ ಖಾತೆಯಲ್ಲಿನ ಹಣ phone pay ಮೂಲಕ 749 ರೂ. ವಂಚಕರ ಖಾತೆಗೆ ವರ್ಗಾವಣೆ ಆಗುತ್ತದೆ
ವಂಚಕರು ಮೊಬೈಲ್ ರೀಚಾರ್ಜ್ ಹೆಸರಿನಲ್ಲಿ ಈ ಒಂದು ಲಿಂಕ್ ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗಿದೆ. 749 ರೂ. ಗಳ ಉಚಿತ ರೀಚಾರ್ಜ್ ಎಂದು ಆನ್ಲೈನ್ ವಂಚಕರು ಸಿಎಂ ಪೋಟೋ ಬಳಸಿ ಫೇಕ್ ಲಿಂಕ್ ಕ್ರಿಯೇಟ್ ಮಾಡಿದ್ದು, ವ್ಯಾಟ್ಸಪ್ ಗ್ರೂಪ್ಗಳಿಗೆ ಹರಿಬಿಟ್ಟಿದ್ದಾರೆ.