ಮಧುಗಿರಿ : ರಾತ್ರಿಯ ವೇಳೆಯಲ್ಲಿ ಬಹಿರ್ ದೆಸೆಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಎರಡು ಕರಡಿಗಳು ದಾಳಿ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ಐಡಿ ಹಳ್ಳಿ ಹೋಬಳಿಯ ಪುಲಮಾಚಿ ಗ್ರಾಮದ ಮಹಿಳೆ ಲಕ್ಷಮ್ಮ ತಮ್ಮ ಮನೆಯ ಸಮೀಪ ಬಹಿರ್ ದೆಸೆಗೆ ಹೋಗಿದ್ದಾಗ ಎರಡು ಕರಡಿಗಳು ದಾಳಿ ನಡೆಸಿದ್ದು ಮಹಿಳೆಯ ದೇಹದ ಕೆಲ ಭಾಗಗಳಿಗೆ ಗಂಭೀರ ಘಾಯಗಳಾಗಿದ್ದು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಮುತ್ತುರಾಜು ಭೇಟಿ ನೀಡಿದ್ದಾರೆ.