ಬೆಂಗಳೂರು : ರಾಜ್ಯದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬರೆ ಬೀಳುತ್ತಿದೆ. ಒಂದು ಕಡೆ ತರಕಾರಿ ರೇಟ್ ಜಾಸ್ತಿ ಆದರೆ ಮತ್ತೊಂದು ಕಡೆ ಬಸ್ ಗಳ ಟಿಕೆಟ್ ದರ ಕೂಡ ಏರಿಕೆಯಾಗಿದೆ.
ಇದೀಗ ಸರ್ಕಾರ ನೇರವಾಗಿ ಮದ್ಯ’ ಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಮೇಲಿನ ಸುಂಕ ದರ ಏರಿಕೆ ಮಾಡಿದೆ. 10 ರೂಪಾಯಿಯಿಂದ 45 ರೂಪಾಯಿವರೆಗೂ ಬೆಲೆ ಏರಿಕೆ ಮಾಡಲಾಗಿದೆ.
ಇಂದಿನಿಂದಲೇ ಪರಿಷ್ಕೃತ ದರ ಜಾರಿ ಮಾಡಲಾಗುತ್ತದೆ. ಕಳೆದ ಆರು ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ.
ಹಾಗಾದ್ರೆ ಯಾವ ಯಾವ ಬ್ರಾಂಡ್ ಎಷ್ಟು? ಬೆಲೆ ಏರಿಕೆಯಾಗಿದೆ ಇಲ್ಲಿದೆ ಮಾಹಿತಿ ಬ್ರಾಂಡ್ – ಹಳೇ ದರ – ಹೊಸ ದರ
Legend – 100ರೂ. – 145 ರೂ Power cool – 130 ರೂ – 155 ರೂ Black fort – 145 ರೂ. – 160 ರೂ Hunter – 180 ರೂ. – 190 ರೂ Woodpeacker crest – 240 ರೂ – 250 ರೂ Woodpecker glide – 230 ರೂ – 240 ರೂ
ಬಿಯರ್ ದರ ಏರಿಕೆಗೆ ಬಾರ್ ಮಾಲೀಕರು, ಮದ್ಯಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾರ್ ಮ್ಯಾನೇಜರ್ ಪ್ರತಿಕ್ರಿಯಿಸಿದ್ದು, ಬಿಯರ್ ದರ ಹೆಚ್ಚಳದಿಂದ ಗ್ರಾಹಕರು ನಮ್ಮ ಜೊತೆ ಜಗಳವಾಡ್ತಾರೆ. ಈ ಸರ್ಕಾರ ಬಂದಮೇಲೆ 5ನೇ ಬಾರಿ ಬಿಯರ್ ದರ ಏರಿಕೆ ಮಾಡಿದೆ ಎಂದು ಅಸಮಾದಾನ ಹೊರಹಾಕಿದರು.