ಬಳ್ಳಾರಿ: ಸಂಡೂರು ತಾಲ್ಲೂಕಿನ ವಡ್ಡಿನಕಟ್ಟೆ ಗ್ರಾಮದ ಕಿತ್ತೂರುರಾಣಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಿರುವ ವಿಜ್ಞಾನ ವಿಭಾಗಕ್ಕೆ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲಾಗಿದ್ದು, ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಿಸಲಾಗಿದೆ.
ಕನ್ನಡ ಉಪನ್ಯಾಸಕರು-01, ಆಂಗ್ಲ ಉಪನ್ಯಾಸಕರು-01, ಭೌತಶಾಸ್ತ್ರ ಉಪನ್ಯಾಸಕರು-01, ರಸಾಯನಶಾಸ್ತ್ರ-01, ಗಣಿತ-01, ಜೀವಶಾಸ್ತ್ರ-01.
ಅರ್ಹ ಅಭ್ಯರ್ಥಿಗಳು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿರಬೇಕು. ಅತಿಥಿ ಉಪನ್ಯಾಸಕರಿಗೆ ಮಾಹೆಯಾನ ರೂ.18,150/- ಗೌರವಧನ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಪ್ರಾಂಶುಪಾಲರು, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ (ಪ.ಪಂ)-485, ವಡ್ಡಿನಕಟ್ಟೆ, ಸಂಡೂರು (ತಾ), ಬಳ್ಳಾರಿ (ಜಿ) ಇಲ್ಲಿಗೆ ಆಗಸ್ಟ್ 20 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಾಲೆಯ ಇ-ಮೇಲ್ ವಿಳಾಸ: [email protected] ಅಥವಾ ಮೊ.9611279510 ಗೆ ಸಂಪರ್ಕಿಸಬಹುದು ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.