ಚಿತ್ರದುರ್ಗ : ಈ ಭಾಗದ ಜನರಿಗೂ, ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ ಈ ಭಾಗದ ಜನರಿಗೆ ನೀರು ಕೊಡುವ ದೃಷ್ಟಿಯಿಂದ ಈ ಡ್ಯಾಂ ನಿರ್ಮಾಣ ಅರಮನೆಗೆ ನಿಕಟವಾದ ಸಂಬಂಧ ಇರೋದ್ರಿಂದ ಇಂದು ಬಾಗಿನ ಅರ್ಪಣೆ ಮೂರನೇ ಬಾರಿ ತುಂಬಿರುವುದರಿಂದ ಗಂಗೆ, ವರುಣನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಯದುವೀರ್ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯ ಭರ್ತಿ ಹಿನ್ನೆಲೆ ಜಲಾಶಯಕ್ಕೆ ಸಂಸದ ಹಾಗೂ ಮೈಸೂರು ಅರಸ ಯದುವೀರ್ ಕೃಷ್ಣದತ್ತ ಒಡೆಯರ್ ಬಾಗಿನ ಅರ್ಪಿಸಿ ವಿವಿಸಾಗರ ಜಲಾಶಯಕ್ಕೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿದ ಬಳಿಕ ಮಾದ್ಯಮಗಳಿಗೆ ಮಾತನಾಡಿದ ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ಕಟ್ಟಿದ್ದ ವಿವಿ ಸಾಗರ ಜಲಾಶಯ ವಿವಿ ಸಾಗರ ಜಲಾಶಯಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಪೂರ್ಣಗೊಂಡಿದೆ ಇದೊಂದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ವಿವಿ ಸಾಗರ ತುಂಬಿದ್ದು ಅತ್ಯಂತ ಸಂತಸದ ವಿಷಯ. ಈ ಜಿಲ್ಲೆಯ ಜನರಿಗೆ ವರ್ಷ ಪೂರ್ತಿ ನೀರು ಲಭ್ಯಕ್ಕೆ ನಿರ್ಮಾಣ ಮಾಡಿತ್ತು. ಈವರೆಗೆ ಜಲಾಶಯ ಸಮಾಜಕ್ಕೆ ಲಾಭ ಆಗುತ್ತ ಬಂದಿದೆ. ಇದಕ್ಕೆ ನಮಗೆ ಮೊದಲಿಂದ ಸಂಬಂಧವಿದ್ದು ಬಾಗಿನ ಅರ್ಪಣೆ. ವರುಣ, ಗಂಗಾ ತಾಯಿಗೆ ಎಷ್ಟು ಕೃತಜ್ಞತೆ ಕೊಟ್ಟರೂ ಸಾಲದು. ಬಾಗಿನ ಅರ್ಪಿಸುವ ಮೂಲಕ ನಮ್ಮ ವಂದನೆಗಳನ್ನ ಅರ್ಪಿಸುತ್ತೇವೆ ಎಂದರು.
ಅಧಿಕಾರ ಇದ್ದಾಗ ಪ್ರಕ್ರಿಯೆ ಏನಿದೆ ಅದನ್ಮ ಅನುಸರಿಸುತ್ತಾ ಹೋಗುತ್ತಾರೆ. ನಮಗೆ ಹಿಂದೆಯೂ ವಿಶೇಷವಾಗಿ ನಮ್ಮನ್ನ ಆಹ್ವಾನಿಸಿರಲಿಲ್ಲ. ಸ್ಥಳಿಯರು ನಮ್ಮನ್ನ ಆಹ್ವಾನ ಕೊಡುತ್ತಿದ್ದರು ಹಾಗೆ ಇವತ್ತು ನಡೆದಿದೆ.ಇದರಲ್ಲಿ ರಾಜಕೀಯ ಮಾಡುವ ಯಾವ ಅವಶ್ಯಕತೆ ಇರುವುದಿಲ್ಲ.ಅಧಿಕಾರದಲ್ಲಿ ಇರುವವರೇ ಬಾಗಿನ ಅರ್ಪಿಸುವುದು.ಸಮಸ್ತ ಕನ್ನಡಿಗರು ಅವರಿಗೆ ಅಧಿಕಾರ ನೀಡಿ ಸ್ಥಾನಕ್ಕೆ ಕೂರಿಸಿದ್ದಾರೆ.ದೇವರ ಕೃತಜ್ಞತೆ ಸಲ್ಲಿಸುವಲ್ಲಿ ನಮ್ಮ ಕಡೆಯಿಂದ ರಾಜಕೀಯ ಆಗಲ್ಲ ಎಂದು ಯದುವೀರ ತಿಳಿಸಿದರು.
ಪ್ರಾರಂಭದಲ್ಲಿ ವಿವಿ ಸಾಗರ ಜಲಾಶಯ ವಿವಿ ಪುರದಲ್ಲಿ ಸಂಸದ ಯದುವೀರ್ ಒಡೆಯರ್ಗೆ ಅದ್ದೂರಿ ಸ್ವಾಗತ ನೀಡಿ ಜೆಸಿಬಿಯ ಮೂಲಕ ಹೂವಿನ್ನು ಚಲ್ಲಿ ಮಾಲಾರ್ಪಣೆ ಮಾಡಿ ಅಭಿಮಾನಿಗಳು ಸಂತಸಪಟ್ಟರುಸತತ ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಯದುವೀರ್ ಒಡೆಯರ್ ಭಾಗಿನವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಬಿಜೆಪಿ ಸ್ಥಳೀಯ ನಾಯಕರು ಸಾಥ್ ನೀಡಿದರು.